‘ರಾಧೇ ಶ್ಯಾಮ್’ಗೆ’ ಸಿನಿಮಾಗೆ ಧ್ವನಿ ನೀಡಲಿದ್ದಾರೆ ಶಿವಣ್ಣ

ಬೆಂಗಳೂರು, ಫೆಬ್ರವರಿ 28, 2022 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೆಲುಗು ಸಿನಿಮಾಗೆ ಧ್ವನಿ ನೀಡುತ್ತಿದ್ದಾರೆ. ಈ ಮೂಲಕ ತೆಲುಗು ಸಿನಿಮಾಗೆ ಶಿವಣ್ಣ ಸಾಥ್ ನೀಡುತ್ತಿದ್ದಾರೆ.

ಪ್ರಭಾಸ್ ಅಭಿನಯದ ಬಹುಭಾಷಾ ಸಿನಿಮಾ ರಾಧೇ ಶ್ಯಾಮ್ ಗೆ ಸ್ಯಾಂಡಲ್ ವುಡ್ ಹೀರೋ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

ರಾಧೇ ಶ್ಯಾಮ್ ತೆಲುಗು, ಕನ್ನಡ, ಮಲಯಾಳ, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಅಂದಹಾಗೆ ರಾಧೆ ಶ್ಯಾಮ್ ಸಿನಿಮಾಗೆ ಆಯಾ ಭಾಷೆಯ ಅವತರಣಿಕೆಗೆ ಆಯಾ ಭಾಷೆಯ ಸ್ಟಾರ್ ನಟರಿಂದ ಹಿನ್ನಲೆ ಧ್ವನಿ ನೀಡಲಾಗುತ್ತದೆ.