ನಟ ಶಾರೂಖ್ ಖಾನ್ ಪುತ್ರನಿಗೆ ಅ.20ರವರೆಗೂ ಜೈಲೇ ಗತಿ.

ಮುಂಬೈ,ಅಕ್ಟೋಬರ್,14,2021(www.justkannada.in):  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್ ಜಾಮೀನು ಅರ್ಜಿಯ ವಿಚಾರಣೆ ಆದೇಶವನ್ನ ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯ ಕಾಯ್ದಿರಿಸಿದೆ.

ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯ ತನ್ನ ಆದೇಶವನ್ನ ಅಕ್ಟೋಬರ್‌ 20ರವರೆಗೆ ಕಾಯ್ದಿರಿಸಿದೆ. ಅದ್ದರಿಂದ ಅಕ್ಟೋಬರ್‌ 20ರವರೆಗೆ ಆರ್ಯನ್‌ ಖಾನ್ ಗೆ ಜೈಲೇ ಗತಿಯಾಗಿದೆ.

ಹಡಗಿನಲ್ಲೇ ಹೈ ಪ್ರೋಫೈಲ್ ಡ್ರಗ್ಸ್ ಪಾರ್ಟಿ ಮಾಡುತ್ತಿದ್ಧ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಅನೇಕರು ಮುಂಬೈನ ಎನ್ ಸಿ ಬಿ ಪೊಲೀಸರ ದಾಳಿಯ ವೇಳೆ ಸಿಕ್ಕಿಬಿದ್ದಿದ್ದರು. ಇನ್ನು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮುಂಬೈನ ಎನ್ ಡಿ ಪಿಎಸ್ ವಿಶೇಷ ಕೋರ್ಟ್, ಆದೇಶವನ್ನ ಅಕ್ಟೋಬರ್‌ 20ರವರೆಗೆ ಕಾಯ್ದಿರಿಸಿದೆ.

Key words: Actor -Shah Rukh Khan- son- jailed- till 20