ನಟ ರಾಕಿಂಗ್ ಸ್ಟಾರ್ ಯಶ್ ನ ಹೊಸ ಚಿತ್ರದ ಟೈಟಲ್ ಲಾಂಚ್.

ಬೆಂಗಳೂರು,ಡಿಸೆಂಬರ್,8,2023(www.justkannada.in): ಕೆಜೆಎಫ್ ಚಿತ್ರದ ಮೂಲಕ ಸಖತ್ ಸದ್ದು ಮಾಡಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಹೊಸಚಿತ್ರದ ಟೈಟಲ್ ಲಾಂಚ್ ಆಗಿದೆ.

ನಟ ಯಶ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಟಾಕ್ಸಿಕ್ (Toxic). ಇದು ಕೆವಿಎನ್ ಪ್ರೊಡಕ್ಷನ್ ನಿಂದ ನಟ ಯಶ್ ನಟನೆಯ 19ನೇ ಚಿತ್ರ ಟಾಕ್ಸಿಕ್ ಹೆಸರು ರಿವೀಲ್ ಮಾಡಲಾಗಿದೆ. ಈ ಚಿತ್ರ ಏಪ್ರಿಲ್.10, 2025ರಂದು ಬಿಡುಗಡೆ ಮಾಡೋದಾಗಿಯೂ ಘೋಷಣೆ ಮಾಡಲಾಗಿದೆ.

ಟ್ಯಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್ ದಾಸ್ ಅವರು ನಿರ್ದೇಶನ ನೀಡಿದ್ದಾರೆ. ಕೆಜಿಎಫ್-2 ಚಿತ್ರದ ಒಂದೂವರೆ ವರ್ಷದ ಬಳಿಕ ನಟ ಯಶ್ ಟಾಕ್ಸಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೈಟಲ್ ಸಖತ್ ಸದ್ದು ಮಾಡುತ್ತಿದೆ.

Key words: Actor -Rocking -Yash’s- new movie- title- launch