ಮೈಸೂರು,ಅಕ್ಟೋಬರ್,16,2025 (www.justkannada.in): ಕಾಂತಾರ ಚಾಪ್ಟರ್ 1 ಸಕ್ಸಸ್ ಆದ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದರು. ಇದೀಗ ನಗರದ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು ಫ್ಯಾನ್ಸ್ ಕ್ರೇಜ್ ನೋಡಿ ಖುಷಿಪಟ್ಟಿದ್ದಾರೆ.
ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿಅಭಿಮಾನಿಗಳ ಜೊತೆ ಮಾತನಾಡಿದರು. ನಮ್ಮನ್ನ ನೋಡಲಿಕ್ಕೆ ನೀವು ಬರಬಹುದು. ನಿಮ್ಮನ್ನ ನೋಡಲಿಕ್ಕೆ ನಾವು ಬರಬಾರದಾ? ಎಂದು ಕಾಂತಾರ ಡೈಲಾಗ್ ಹೊಡೆದು ರಂಜಿಸಿದರು.
ಬಳಿಕ ಮಾತನಾಡಿದ ಅವರು, ಇಡೀ ಚಿತ್ರತಂಡ ಮೂರು ವರ್ಷದ ಕಷ್ಟ. ಟೀ ಕಾಫಿ ಕೊಡುವ ಹುಡುಗರಿಂದ ಎಲ್ಲರ ಶ್ರಮ ಹಾಕಿದ್ದಾರೆ. ಕಲಾವಿದರಾಗಿ ನಾವು ಇದನ್ನ ತುಂಬಾ ಎಂಜಾಯ್ ಮಾಡ್ತೀವಿ.. ನಾವು ಈ ಕ್ಷಣಗಳನ್ನ ಹೆಚ್ಚು ಸಂಭ್ರಮಪಡ್ತಿದ್ದೀವಿ. ಹತ್ತಾರು ಅಡೆತಡೆಗಳನ್ನ ಮೀರಿ, ಕಷ್ಟ ನಷ್ಟ ಮೀರಿ ಒಂದು ಹಂತ ತಲುಪಿದ್ದೇವೆ. ಒಂದು ದೈವದ ಚಿತ್ರ ಹೇಳುವಾಗ ಪರೀಕ್ಷೆ ಸಹಜ. ಅಣ್ಣಾವ್ರು ಹೇಳ್ತಿದ್ರು ಅಭಿಮಾನಿಗಳನ್ನ ತಲುಪುವುದು ಕಷ್ಟ ಅಂತ. ಅದರಂತೆ ನಾವು ಏಳುಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ. ದೈವಗಳನ್ನ ಅಣಕಿಸುವ ಕೆಲಸ ಆಗ್ತಿದೆ. ಕೆಲವು ಸೋಶಿಯಲ್ ಮೀಡಿಯಾಗಳು ಮಾಡ್ತಿದ್ದಾರೆ. ಪದೇ ಪದೇ ಅವರ ಬಳಿ ಮನವಿ ಮಾಡುತ್ತಿದ್ದೇವೆ. ಇದು ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮಾ
ನಮ್ಮಲ್ಲಿ ಕೋಲ ಹೇಗೆ ನಡೆಯುತ್ತೆ ಹಾಗೆ ದೇವರನ್ನ ಭಕ್ತಿಯಿಂದ ಪೂಜಿಸಿದ್ದೇವೆ. ನಮ್ಮ ಮನೆಯಲ್ಲೂ ದೈವ ಸ್ಥಾನವಿದೆ.. ನಾನು ಕೂಡ ದೈವರಾಧಕ. ಅದನ್ನ ನಂಬುವವರಿಗೆ ಹರ್ಟ್ ಆಗುತ್ತಿದೆ. ಕನ್ನಡ ಪ್ರೇಕ್ಷಕರು ಎಂದೂ ಕೈಬಿಟ್ಟಿಲ್ಲ. ಕನ್ನಡಿಗರು ಒಂದು ಒಳ್ಳೆ ಸಿನಿಮಾ ಮಾಡಿದರೆ ನಾವು ಬರ್ತೀವಿ ಅಂತಾರೆ. ಅದೇ ರೀತಿ ಕಾಂತಾರ ಚಿತ್ರವನ್ನ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಸಂತಸಪಟ್ಟರು.
Key words: Actor, Rishabh Shetty, Visit , Gayatri Talkies, Mysore