ಗಾಜಿನ ಸೆಟ್… ವಿಭಿನ್ನ, ವಿಶೇಷ…! ಮಗಳ ಮದುವೆಗೆ ತಲೆ, ಪ್ರೀತಿ ಖರ್ಚು ಮಾಡ್ತಿದ್ದಾರೆ ಕ್ರೇಜಿಸ್ಟಾರ್

0
1722

ಬೆಂಗಳೂರು, ಮೇ 17, 2019 (www.justkannada.in): ಇದೇ ತಿಂಗಳು 28 ಮತ್ತು 29 ರಂದು ಅರಮನೆ ಮೈದಾನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ನಡೆಯಲಿದೆ.

ಸಿನಿಮಾ ಮಾಡಿದಂತೆಯೇ ಮದುವೆ ಕೂಡ ನಡೆಯಲಿದೆ. ಇದಕ್ಕಾಗಿ ಗಾಜಿನ ಸ್ಟೇಜ್ ಹಾಕಿಸಿದ್ದು, ಸಮಾರಂಭಕ್ಕೆ ಸಾಕಷ್ಟು ತಲೆ ಹಾಗೂ ಪ್ರೀತಿ ಖರ್ಚು ಮಾಡಿದ್ದೇನೆ. ಆದರೆ ದುಡ್ಡು ಖರ್ಚು ಮಾಡಿಲ್ಲ ಎಂದಿದ್ದಾರೆ ಎಂದಿದ್ದಾರೆ ಕ್ರೇಜಿಸ್ಟಾರ್.

ಮಗಳ ಮದುವೆಗೆ ಬೆಲೆ ಕಟ್ಟಬೇಡಿ, ಆಹ್ವಾನ ಪತ್ರಿಕೆಗೆ ಖರ್ಚಾಗಿರುವುದು ನನ್ನ ತಲೆ ಅಷ್ಟೇ. ನಾನು ಪ್ರತಿ ಮದುವೆಗೆ ಹೋದಾಗ 2 ನಿಮಿಷ ಇರುತ್ತೇನೆ. ಅದಕ್ಕಾಗಿಯೇ ಮದುವೆಗೆ ಬರುವ ಎಲ್ಲರೂ ಆರಾಮಾವಾಗಿ ಇರಬೇಕು ಎಂದು ಉತ್ತಮ ವಾತಾವರಣವನ್ನು ಕ್ರೀಯೆಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.