ಶೂಟಿಂಗ್’ಗೆ ಬಿಡುವು: ಟ್ರಕ್ಕಿಂಗ್ ಮಾಡಿಬಂದ ರಕ್ಷಿತ್ ಶೆಟ್ಟಿ !

ಬೆಂಗಳೂರು, ಜುಲೈ 10, 2019 (www.justkannada.in): ನಟ ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಬ್ಯೂಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ತುಮಕೂರು ಜಿಲ್ಲೆಯ ಸಿದ್ದರಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿ ಬಂದಿದ್ದಾರೆ.

‘ಜಿಮ್ ನಲ್ಲಿ ವರ್ಕೌಟ್ ಮಾಡುವುದಕ್ಕಿಂತ ಟ್ರಕ್ಕಿಂಗ್ ಗೆ ಹೋಗಿ ಪ್ರಕೃತಿ ಜೊತೆಗೆ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಬಹುದು. ಇದು ಎಲ್ಲರಿಗೂ ಅಗತ್ಯವಿದೆ.

ಜಿಮ್ ನಲ್ಲಿ ಮಾಮೂಲಿಯಾಗಿ ವರ್ಕೌಟ್ ಮಾಡುತ್ತೇನೆ. ಸ್ವಲ್ಪ ಬದಲಾವಣೆಯಿರಲಿ ಎಂಬ ಕಾರಣಕ್ಕೆ ಟ್ರೆಕ್ಕಿಂಗ್ ಗೆ ಹೋಗಿ ಬಂದಿದ್ದೇವೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.