ಪವರ್ ಸ್ಟಾರ್ ಅಭಿಮಾನಿಗಳ ಅಪ್ಪುಗೆ ಬರ್ತ್ ಡೇ ಸಂಭ್ರಮ !

0
245

ಬೆಂಗಳೂರು, ಮಾರ್ಚ್ 17, 2020 (www.justkannada.in): ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್’ಗೆ ಜನ್ಮದಿನದ ಸಂಭ್ರಮ.

ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಕಾದಿದ್ದ ಅಭಿಮಾನಿಗಳಿಗೆ ಕೊರೋನಾ ಭೀತಿ ನಿರಾಸೆ ಮೂಡಿಸಿದೆ.

ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಎಲ್ಲರ ಜತೆ ಹುಟ್ಟುಹಬ್ಬ ಆಚರಿಸಲ್ಲ. ಯಾರೂ ಮನೆಯ ಬಳಿ ಬರಬೇಡಿ ಎಂದು ಈಗಾಗಲೇ ಪುನೀತ್ ಮನವಿ ಮಾಡಿದ್ದರು.

ಅದರೆ ಪುನೀತ್ ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂದು ಯುವರತ್ನ ಟೀಸರ್, ಜೇಮ್ಸ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.