ಆ್ಯಕ್ಸನ್ ಕಟ್ ಹೇಳಲು ಮೋಹಲ್ ಲಾಲ್ ರೆಡಿ !

ಬೆಂಗಳೂರು, ಆಗಸ್ಟ್ 01, 2019 (www.justkannada.in): ನಟ ಮೋಹನ್‌ಲಾಲ್‌ ನಿರ್ದೇಶಕನಾಗುತ್ತಿದ್ದಾರೆ.

‘ಬಾರೋಸ್‌’ ಎಂಬ ಬಿಗ್‌ ಬಜೆಟ್‌ ಥ್ರೀಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ವಾಸ್ಕೋಡಿಗಾಮ ಸಂಪತ್ತಿನ ಕಾವಲುಗಾರನಾದ ಬಾರೋಸ್‌ನ ಕತೆ ಈ ಸಿನಿಮಾವಾಗಿದ್ದರಿಂದ ಪೋರ್ಚುಗೀಸ್‌ ಕಥಾಹಂದರ ಹೊಂದಿದೆ.

ಸ್ಪೇನ್‌ನ ನಟಿ ಪಜ್‌ ವೇಗಾ ಹಾಗೂ ನಟ ರಫೇಲ್‌ ಅಮರ್ಗೊ ಅವರು ಪಾತ್ರ ಮಾಡಲಿದ್ದಾರೆ. ಅಂತರರಾಷ್ಟ್ರೀಯ ಸಿನಿಮಾದಲ್ಲಿ ಪಜ್‌ ವೇಗಾ ಹೆಸರು ಚಿರ‍ಪರಿಚಿತವಾಗಿದೆ.