ಮುನಿಸು ಮರೆತು ಒಂದಾದ ಜಗ್ಗೇಶ್-ಗುರುಪ್ರಸಾದ್

ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ವರಸನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿ ಈಗ ಮತ್ತೆ ಒಂದಾಗಿದೆ.

ಇಬ್ಬರು ಮುನಿಸು ಮರೆತು ಒಂದಾಗಿದ್ದು ಮಾತ್ರವಲ್ಲ ಈ ಜೋಡಿ ಮತ್ತೊಂದು ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.

ಮಠ, ಎದ್ದೇಳು ಮಂಜುನಾಥ ಅಂತಹ ಸೂಪರ್ ಹಿಟ್ ಕಾಮಿಡಿ ಸಿನಿಮಾಗಳನ್ನು ನೀಡಿದ ಈ ಜೋಡಿ ಆ ನಂತರ ದೂರ ದೂರ ಆಗಿದ್ದರು.

ಈ ಕುರಿತು ಸ್ವತಃ ನಿರ್ದೇಶಕ ಗುರುಪ್ರಸಾದ್ ಹೇಳಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಜಗ್ಗೇಶ್ ಮತ್ತು ಗುರುಪ್ರಸಾದ್ ಫೋಟೋವನ್ನು ಶೇರ್ ಮಾಡಿದ್ದಾರೆ.