‘ಐ ಲವ್ ಯು’ ಚಿತ್ರದ ಗಳಿಕೆ ‘ನನ್ ಯಕ್ಕಡ’ ಎಂದ ಹುಚ್ಚ ವೆಂಕಟ್ !

ಬೆಂಗಳೂರು, ಜೂನ್ 17, 2019 (www.justkannada.in): ‘ಐ ಲವ್ ಯೂ’ ಚಿತ್ರದ ಕುರಿತಂತೆ ನಟ, ನಿರ್ದೇಶಕ ಹುಚ್ಚ ವೆಂಕಟ್ ಗರಂ ಆಗಿದ್ದಾರೆ !

ಚಿತ್ರದಲ್ಲಿ ರಚಿತಾ ರಾಮ್ ಪುಲ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಹುಚ್ಚ ವೆಂಕಟ್ ರೊಚ್ಚಿಗೆದ್ದಿದ್ದಾರೆ. ಕೊನೆಗೆ ಕ್ಷಮೆಯನ್ನೂ ಕೇಳಿದ್ದಾರೆ.

ಆ ನಟಿಯನ್ನು ನೀವು ಬೇಕು ಬೇಕಂತಲೇ ಬಳಸಿಕೊಂಡಿದ್ದೀರಿ. ನೀವು ಹೊಲಸು ತಿನ್ನಿ. ಹೆಣ್ಣು ಮಕ್ಕಳ ಸಂಸ್ಕೃತಿಯನ್ನು ಹಾಳು ಮಾಡಬೇಡಿ ಎಂದು ಚಿತ್ರ ತಂಡದ ವಿರುದ್ಧ ಹರಿಹಾಯ್ದಿದ್ದಾರೆ. ಆ ಚಿತ್ರದ ಗಳಿಕೆ ನನ್ ಯಕ್ಕಡ ಎಂದು ಹೇಳಿದ್ದಾರೆ.