ಸಿಂಪಲ್ ಸುನಿ ಚಿತ್ರದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್ ಪುತ್ರ !

ಬೆಂಗಳೂರು, ಆಗಸ್ಟ್ 27, 2021 (www.justkannada.in): ಗೋಲ್ಡನ್​ ಸ್ಟಾರ್ ಗಣೇಶ್ ಪುತ್ರನಿಗೆ ಸಿನಿಮಾದಲ್ಲಿ ಮತ್ತೊಂದು ಚಾನ್ಸ್ ಕೊಟ್ಟಿದ್ದಾರೆ ನಿರ್ದೇಶಕ ಸಿಂಪಲ್ ಸುನಿ!

ಹೌದು. ಗಣೇಶ್ ಪುತ್ರ ವಿಹಾನ್ ಅಪ್ಪನ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿಂಪಲ್ ಸುನಿ ಅವರ ಸಖತ್​ ಚಿತ್ರದಲ್ಲಿ ಗಣೇಶ್​ ಕಣ್ಣು ಕಾಣದ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಹಾನ್​ ಬಾಲ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದು ಗಣೇಶ್ ಪುತ್ರ ವಿಹಾನ್ ಹುಟ್ಟುಹಬ್ಬ. ಅದರ ಅಂಗವಾಗಿಯೇ ಈ ಪೋಸ್ಟರ್​ ಅನ್ನು ಗಣೇಶ್ ಅವರು ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಸಹ ವಿಹಾನ್ ಅಪ್ಪ ಗಣೇಶ್​ ಜತೆ ನಟಿಸಿದ್ದಾರೆ. ಗೀತಾ ಸಿನಿಮಾದಲ್ಲಿ ವಿಹಾನ್ ಹಾಗೂ ಗಣೇಶ್​ ತೆರೆ ಹಂಚಿಕೊಂಡಿದ್ದಾರೆ.