ಸುಪ್ರೀಂ ನಲ್ಲಿ ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ: ಸರ್ಕಾರ ಪರ ವಾದ ಮಂಡನೆ ಅಂತ್ಯ

ನವದೆಹಲಿ,ಜುಲೈ,24,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದುಕೋರಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ ಪರ್ದೀವಾಲ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂತ್ರಾ  ಅವರ ವಾದ ಮಂಡನೆ ಮುಕ್ತಾಯವಾಗಿದ್ದು ಇದೀಗ ನಟ ದರ್ಶನ್ ಪರ ವಕೀಲ ಸಿದ್ದಾರ್ಥ್ ದವೆ ವಾದ ಮಂಡಿಸುತ್ತಿದ್ದಾರೆ. ಇಂದೇ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ .

ಕೊಲೆ ಬಳಿಕ ಇಂತಹ ಫೋಟೊ ತೆಗೆದುಕೊಳ್ಳಲು ಸಾಧ್ಯವಾ? ನ್ಯಾಯಮೂರ್ತಿ ಅಚ್ಚರಿ

ಕೊಲೆ ಬಳಿಕ ಫೋಟೊ ತೆಗೆದುಕೊಂಡ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ  ನ್ಯಾಯಮೂರ್ತಿ ಜೆ.ಬಿ ಪರ್ದೀವಾಲ, ಅನ್ ಬಿಲಿವಬಲ್ ಮಿ. ಸಿದ್ಧಾರ್ಥ್ ಲೂತ್ರಾ . ಕೊಲೆ ಮಾಡಿ ಇಂತಹ ಫೋಟೊ ತೆಗೆದುಕೊಳ್ಳಲು ಸಾಧ್ಯವೇ?  ಇವರೆಂತಹ ವ್ಯಕ್ತಿಗಳು ನಾನು ಆಕಸ್ಮಿಕ ಫೋಟೊ ಎಂದು ಕೊಂಡಿದ್ದೆ ಎಂದು ನಟ ದರ್ಶನ್ ಜೊತೆ ಆರೋಪಿಗಳ ಫೋಟೊಗೆ ಅಚ್ಚರಿ ವ್ಯಕ್ತಪಡಿಸಿದರು.vtu

Key words: actor, Darshan, bail, cancellation, petition, Supreme Court