ಕೀನ್ಯಾದಲ್ಲಿ ಬುಡಕಟ್ಟು ಸಮುದಾಯದೊಂದಿಗೆ ಹಾಡಿ, ಕುಣಿದ ದರ್ಶನ್

ಬೆಂಗಳೂರು, ಅಕ್ಟೋಬರ್ 01, 2019 (www.justkannada.in): ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀನ್ಯಾದಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಸಮಯ ಕಳೆದಿದ್ದಾರೆ.

ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಬುಡಕಟ್ಟು ಜನಾಂಗದವರ ಹಳ್ಳಿಗೆ ಭೇಟಿ ನೀಡಿದ ದರ್ಶನ್ ಸಫಾರಿ ವೇಳೆ ಅಲ್ಲಿ ವಿವಿಧ ಪ್ರಾಣಿಗಳ ಫೋಟೋ ತೆಗೆದಿದ್ದಾರೆ.

ಬುಡಕಟ್ಟು ಸಮುದಾಯದವರ ಮಣ್ಣು ಗುಡಿಸಲಿನ ಪುಟ್ಟ ಮನೆ, ಅವರ ಸಂಪ್ರದಾಯ ಉಡುಗೆ ತೊಡುಗೆ ಆಭರಣಗಳನ್ನು ಕಂಡು ಖುಷಿಯಾದ ದರ್ಶನ್ ಬುಡಕಟ್ಟು ಜನರೊಂದಿಗೆ ನೃತ್ಯ ಕೂಡ ಮಾಡಿದ್ದಾರೆ.