ಬೆಂಗಳೂರು,ಆಗಸ್ಟ್,30,2025 (www.justkannada.in): ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತ ನಟ ಆರೋಪಿ ದರ್ಶನ್ ಹಾಸಿಗೆ-ದಿಂಬಿಗೆ ಬೇಡಿಕೆಯಿಟ್ಟು ಅರ್ಜಿ ಸಲ್ಲಿಸಿದ್ದು ವಿಚಾರಣೆ ಸೆಪ್ಟಂಬರ್ 2ಕ್ಕೆ ಮುಂದೂಡಿಕೆಯಾಗಿದೆ.
ಹಾಗೆಯೇ ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆಯೂ ಸೆಷನ್ಸ್ ಕೋರ್ಟ್ ನಲ್ಲಿ ಸೆಪ್ಟಂಬರ್ 2ಕ್ಕೆ ಮುಂದೂಡಿಕೆಯಾಗಿದೆ. ಇಬ್ಬರ ಅರ್ಜಿ ವಿಚಾರಣೆಯ ತೀರ್ಪು ಸೆಪ್ಟೆಂಬರ್ 2ಕ್ಕೆ ಹೊರ ಬೀಳಲಿದೆ.
ದರ್ಶನ್ ಅವರಿಗೆ ವಿಶೇಷ ಸವಲತ್ತು ನೀಡದಂತೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ನಿಯಮದಲ್ಲಿರುವಂತೆ ಒಂದು ಬೆಡ್ ಶೀಟ್ ಮಾತ್ರ ನೀಡಲಾಗಿದೆ ಎನ್ನಲಾಗಿದೆ. ಹೆಚ್ಚುವರಿಯಾಗಿ ಯಾವುದೇ ಬೆಡ್ಶೀಟ್ ಕೊಟ್ಟಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಆಗಿದೆ.
‘ದರ್ಶನ್ಗೆ ಬೆಡ್ ಶಿಟ್, ದಿಂಬು ಕೊಡುತ್ತಿಲ್ಲ. ಕೋರ್ಟ್ನಿಂದ ನಿರ್ದೇಶನ ತನ್ನಿ ಎಂದಿದ್ದಾರೆ’ ಎಂದು ದರ್ಶನ್ ಪರ ವಕೀಲ್ ಸುನೀಲ್‌ಕುಮಾರ್ ಸೆಷನ್ಸ್ ಕೋರ್ಟ್ ನಲ್ಲಿ ವಾದ ಮಾಡಿದ್ದಾರೆ. ಇನ್ನು, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಅರ್ಜಿ ಸಲ್ಲಿಕೆ ಆಗಿತ್ತು. ಇದರ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ ಆಗಿದೆ.
Key words: Actor Darshan, Bed, demand, Pavithra Gowda, bail application, postponed