Saturday, September 19, 2026

BDA Apartments

ನಟ ದರ್ಶನ್ ಹಳೇ ಕೇಸ್ ಗೆ ಮರುಜೀವ: ಎನ್ ಸಿಆರ್ ದಾಖಲು BDA JK_Adv BDA Adv
Home Cinema ನಟ ದರ್ಶನ್ ಹಳೇ ಕೇಸ್ ಗೆ ಮರುಜೀವ: ಎನ್ ಸಿಆರ್ ದಾಖಲು

ನಟ ದರ್ಶನ್ ಹಳೇ ಕೇಸ್ ಗೆ ಮರುಜೀವ: ಎನ್ ಸಿಆರ್ ದಾಖಲು

ಬೆಂಗಳೂರು,ಅಕ್ಟೋಬರ್,18,2024 (www.justkannada.in): ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಬಳ್ಳಾರಿ ಜೈಲಿನಲ್ಲಿ ಜೈಲುವಾಸ  ಅನುಭವಿಸುತ್ತಿರುವ ನಟ ದರ್ಶನ್ ಗೆ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದ್ದು, ಹಳೇ ಕೇಸ್ ಗೆ ಮರುಜೀವ ಸಿಕ್ಕಿದೆ.

ಹೌದು,  ನಟ ದರ್ಶನ್ ವಿರುದ್ಧದ ಹಳೇ ಕೇಸ್ ಗೆ ಮರುಜೀವ ಬಂದಿದ್ದು, ಕೆಂಗೇರಿ ಠಾಣೆಯಲ್ಲಿ ಹೊಸ ಎನ್ ಸಿ ಆರ್ ದಾಖಲಾಗಿದೆ. ನಿರ್ಮಾಪಕ ಭರತಗೆ ಕರೆ ಮಾಡಿ ದರ್ಶನ್ ಬೆದರಿಕೆ ಹಾಕಿದ್ದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ ಎನ್ನಲಾಗಿದೆ.

ಭಗವಾನ್ ಶ್ರೀ ಕೃಷ್ಣ ಚಿತ್ರದ ನಿರ್ಮಾಪಕ ಭರತ್ ಅವರು ಈ ಹಿಂದೆಯೇ ದೂರು ನೀಡಿದ್ದರು. 2022 ರಲ್ಲಿ ಚಿತ್ರದ ನಾಯಕ ದೃವನ್ ವಿರುದ್ಧ ದೂರು ದಾಖಲಾಗಿತ್ತು. ನಟ ದರ್ಶನ್ ಕೈಯಲ್ಲಿ ಪೋನ್ ಮೂಲಕ ಬೆದರಿಕೆ ಹಾಕಿಸಿದ ಆರೋಪ ಕೇಳಿ ಬಂದಿತ್ತು.

ಸಿನಿಮಾ ವಿಚಾರವಾಗಿ ನಟ ದರ್ಶನ್ ಬಳಿ ದೃವನ್ ಹೋಗಿದ್ದರು. ದರ್ಶನ್ ಮೂಲಕ ನಿರ್ಮಾಪಕ ಭರತ್ ಗೆ  ದೃವಂತ್ ಕರೆ ಮಾಡಿಸಿ ಸಿನಿಮಾ ಚಿತ್ರೀಕರಣ ಮುಗಿಸದಿದ್ದರೆ ನೀನೇ ಇರುವುದಿಲ್ಲ ಅಂತ ದರ್ಶನ್ ರಿಂದ ಬೆದರಿಕೆ ಹಾಕಿಸಿದ್ದರು ಎನ್ನಲಾಗಿದೆ.

ನಿರ್ಮಾಪಕ ಭರತ್ ಗೆ ಕರೆ ಮಾಡಿ ದರ್ಶನ್ ಬೆದರಿಕೆ ಹಾಕಿದ್ದ ಆರೋಪ  ಸಂಬಂಧ  ನಿರ್ಮಾಪಕ ಭರತ್ ಕೆಂಗೇರಿ ಠಾಣೆಗೆ ಅಂದು ದೂರು ನೀಡಿದ್ದರು. ‍ದೃವನ್ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದರೆಂದು ಎನ್ ಸಿಆರ್ ದಾಖಲಾಗಿತ್ತು. ಆದರೆ ಪೊಲೀಸರು ಧ್ರುವ ಮತ್ತು ದರ್ಶನ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಇದೀಗ ಬೆದರಿಕೆ ಆರೋಪದಡಿ ದೃವನ್ ನಟ ದರ್ಶನ್ ಹಾಗೂ ದರ್ಶನ್ ಮ್ಯಾನೇಜರ್ ನಾಗರಾಜ್ ವಿರುದ್ಧ ಮತ್ತೆ ಎನ್ ಸಿಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  Actor Darshan, old case, NCR, filed