ನಟ ದರ್ಶನ್ ಅವರನ್ನ ಬಂಧಿಸಿಲ್ಲ: ವಿಚಾರಣೆ ನಡೆಸುತ್ತಿದ್ದಾರೆ- ವಕೀಲ ನಾರಾಯಣಸ್ವಾಮಿ

ಬೆಂಗಳೂರು,ಜೂನ್,11,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಅವರನ್ನು ಬಂಧಿಸಿಲ್ಲ. ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ  ಎಂದು ದರ್ಶನ್ ಅವರ ಪರ ವಕೀಲ  ನಾರಾಯಣಸ್ವಾಮಿಯವರು ತಿಳಿಸಿದ್ದಾರೆ.

ಇಂದು ಈ ಕುರಿತು ಮಾತನಾಡಿದ ನಟ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಅವರು ದರ್ಶನ್‌ ಅವರನ್ನು ಬಂಧಿಸಿಲ್ಲ, ಅವರನ್ನು ವಿಚಾರಣೆಗೆ ಕರೆ ತರಲಾಗಿದೆ. ಅವರು ಕೊಲೆ ಮಾಡಿದ್ದಾರೆ ಎನ್ನುವುದು ಸುಳ್ಳು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌  ಸೇರಿದಂತೆ  11 ಮಂದಿಯನ್ನು ಬಂಧಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ನಟ ದರ್ಶನ್ ಅವರನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Key words: Actor, Darshan, not, arrested, lawyer