ನಟ ದರ್ಶನ್ ಕೈದಿ ಸಂಖ್ಯೆ  6106 ಇದೇ ನಮಗೆ ಲಕ್ಕಿ ನಂಬರ್: ರಿಜಿಸ್ಟರ್ ಮಾಡಿಸಲು ಮುಂದಾದ ಅಭಿಮಾನಿ

ಮೈಸೂರು,ಜೂನ್,24,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ನೀಡಿರುವ ಕೈದಿ ಸಂಖ್ಯೆಯನ್ನ ಅಭಿಮಾನಿಯೊಬ್ಬರು ತಮ್ಮ ಗಾಡಿ ಮೇಲೆ ಹಾಕಿಸಿಕೊಳ್ಳಲು ಆರ್ ಟಿಓನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ.

ಹೌದು ಮೈಸೂರಿನ ಬನ್ನೂರಿನ ಧನುಷ್ ಎಂಬುವವರು ನಟ ದರ್ಶನ್ ಗೆ ಪರಪ್ಪನ ಅಗ್ರಹಾರದ ಜೈಲಲ್ಲಿ ನೀಡಿರುವ ನಂಬರ್ 6106 ಅನ್ನು ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್ ಈ ನಂಬರ್ ನಮ್ಮ ಗಾಡಿ ಮೇಲೆ ಇರುತ್ತದೆ ಎಂದಿದ್ದಾರೆ. ಅಲ್ಲದೆ ಇದೇ ನಂಬರ್ ನಲ್ಲಿ  ಆರ್ ಟಿಓನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ.

ಇನ್ನು  ದರ್ಶನ್ ಜೈಲುವಾಸ ನೆನೆದು ಗಳಗಳನೆ ಕಟ್ಟೀರಿಟ್ಟ ಅಭಿಮಾನಿ ಧನುಷ್,  ನಟ  ದರ್ಶನ್ ಶೀಘ್ರ ಬಿಡುಗಡೆಗೆ ಹರಕೆ ಹೊತ್ತಿದ್ದಾರೆ. ನಾಡ ಅಧಿದೇವತೆ  ತಾಯಿ ಚಾಮುಂಡೇಶ್ವರಿಯಲ್ಲಿ ಹರಕೆ ಹೊತ್ತಿದ್ದಾರೆ.

ದರ್ಶನ್ ರನ್ನ ಶೀಘ್ರ ಬಿಡುಗಡೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ದರ್ಶನ್ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.

ನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ‌ಬಾಸ್ ಅನ್ನ ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದರೆ ರಾಜಾರೋಷವಾಗಿ ಬರುತ್ತಾರೆ ಎಂದಿದ್ದಾರೆ ಧನುಷ್.

Key words: Actor, Darshan, No. 6106, lucky number, fan