Tuesday, August 4, 2026

BDA Apartments

Home Cinema ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ: ಮೂರು FIR ದಾಖಲು

ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ: ಮೂರು FIR ದಾಖಲು

ಬೆಂಗಳೂರು,ಆಗಸ್ಟ್,26,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೂರು ಎಫ್ ಐಆರ್ ದಾಖಲಾಗಿದೆ.

ಪ್ರಕರಣ ಸಂಬಂಧ ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳು ಸೀನ ಹಾಗೂ ನಾಗರಾಜ್ ಮೇಲೆ ಜೈಲು ಸೂಪರಿಂಟೆಂಡೆಂಟ್ ಕೊಟ್ಟ ದೂರಿನ ಮೇರೆಗೆ ಎಫ್ ಐಆರ್ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಗರೇಟ್ ಕೊಟ್ಟಿದ್ದಕ್ಕೆ ಮೊದಲ ಎಫ್ ಐಆರ್, ವೀಡಿಯೋ ಮಾಡಿ ವೈರಲ್ ಮಾಡಿದ್ದಕ್ಕೆ ಮತ್ತೊಂದು ಎಫ್ ಐ ಆರ್ ಹಾಗೂ ಜೈಲಿಂದ ಬಾಕ್ಸ್ ಗಳನ್ನು ತಗೊಂಡು ಹೋಗಿದ್ದಕ್ಕೆ ಮತ್ತೊಂದು ಎಫ್ ಐಆರ್ ದಾಖಲಾಗಿದೆ  ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿರುವ ಕಾರಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಪ್ರಕರಣ ಸಂಬಂಧ 3 ಎಫ್ ಐಆರ್ ದಾಖಲಾಗಿದೆ. ಮೊಬೈಲ್, ಸಿಗರೇಟ್ ಕಫೀ ನೀಡುರುವ ಬಗ್ಗೆ ಕೇಸ್ ಆಗಿದ್ದು,  ಎಫ್ ಐಆರ್ ನಲ್ಲಿ ದರ್ಶನ್ ಹೆಸರು ಇದೆ. ಜೈಲಿನಲ್ಲಿ ಸಿಸಿ ಕ್ಯಾಮಾರಾ ಲ್ಯಾಪ್ಸ್ ಆಗಿವೆ. ಅಧಿಕಾರಿಗಳ ವೈಪಲ್ಯದಿಂದ ಈ ಘಟನೆ ನಡೆದಿದೆ ಎಂದು  ತಿಳಿಸಿದ್ದಾರೆ.

Key words: Actor, Darshan, jail, Three, FIR, filed