Wednesday, October 7, 2026

BDA Apartments

immense respect BDA JK_Adv BDA Adv
Home Cinema ನಟ ದರ್ಶನ್ ಗೆ ರಿಲೀಫ್: ಮಧ್ಯಂತರ ಜಾಮೀನು ಮಂಜೂರು

ನಟ ದರ್ಶನ್ ಗೆ ರಿಲೀಫ್: ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು,ಅಕ್ಟೋಬರ್,30,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 5 ತಿಂಗಳಿಂದ ಜೈಲುವಾಸ ಅನುಭವಿಸುತ್ತಿರುವ 2ನೇ ಆರೋಪಿ ನಟ ದರ್ಶನ್ ಗೆ ರಿಲೀಫ್ ಸಿಕ್ಕಿದ್ದು ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ವಾದ ಪ್ರತಿವಾದ ಆಲಿಸಿ ಜಾಮೀನು ಆದೇಶ ಕುರಿತು ಇಂದಿಗೆ  ತೀರ್ಪು ಕಾಯ್ದಿರಿದ್ದರು. ಇದೀಗ ತೀರ್ಪು ಪ್ರಕಟಿಸಿದ್ದು ನಟ ದರ್ಶನ್ ಗೆ 6 ವಾರಗಳ ಕಾಲ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.

ನಟ ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ದಾಖಲಿಸಬಹುದು. ಒಂದು ವಾರದಲ್ಲಿ ಚಿಕಿತ್ಸೆ ವಿವರ ಕೊಡಬೇಕು. ಪಾಸ್ ಪೋರ್ಟ್ ಸರಂಡರ್ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ.

Key words: actor, Darshan, Interim bail, granted, high court