ನಟ ದರ್ಶನ್ ಗೆ ಅನಾರೋಗ್ಯ ಹಿನ್ನೆಲೆ; ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

ಮೈಸೂರು,ಮಾ,4,2020(www.justkannada.in):  ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್ ಗೆ ಅನಾರೋಗ್ಯ ಉಂಟಾಗಿದ್ದು  ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟ ದರ್ಶನ್ ಅವರಿಗೆ ಕಳೆದ ಹಲವು ದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇತ್ತು. ಈ ನಡುವೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಇಂದು ಮುಂಜಾನೆ 4ಗಂಟೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಒಂದು ದಿನ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯುವಂತೆ ವೈದ್ಯರ ಸೂಚನೆ ಹಿನ್ನೆಲೆ ಆಸ್ಪತ್ರೆಯಲ್ಲೇ ಉಳಿದು ನಟ ದರ್ಶನ್ ಚಿಕಿತ್ಸೆ ಪಡೆದಿದ್ದಾರೆ.

ನಟ ದರ್ಶನ್ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ನಡುವೆ ನಟ ದರ್ಶನ್ ಹಲವು ಶೂಟಿಂಗ್ ಗಳಲ್ಲಿ ಭಾಗವಹಿಸಿದ್ದರು.

Key words: actor –darshan- Illness  -Treatment – private hospital – Mysore.