Sunday, September 20, 2026

BDA Apartments

ನಟ ದರ್ಶನ್ ರಾಜಕೀಯಕ್ಕೆ ಬರ್ತಾರೆ: ಭವಿಷ್ಯ ನುಡಿದ ಗುರೂಜಿ BDA JK_Adv BDA Adv
Home Cinema ನಟ ದರ್ಶನ್ ರಾಜಕೀಯಕ್ಕೆ ಬರ್ತಾರೆ: ಭವಿಷ್ಯ ನುಡಿದ ಗುರೂಜಿ

ನಟ ದರ್ಶನ್ ರಾಜಕೀಯಕ್ಕೆ ಬರ್ತಾರೆ: ಭವಿಷ್ಯ ನುಡಿದ ಗುರೂಜಿ

ಬೆಂಗಳೂರು,ಅಕ್ಟೋಬರ್,31,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ನಟ ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಈ ಬೆನ್ನಲ್ಲೆ ಇದೀಗ ನಟ ದರ್ಶನ್ ರಾಜಕೀಯದ ಬಗ್ಗೆ ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಹೌದು,  ನಟ ದರ್ಶನ್ ರಾಜಕೀಯಕ್ಕೆ ಬರುತ್ತಾರೆ. ನಟ ದರ್ಶನ್ ಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ.  ಅವರು ಯಾರ ಮನೆ ಬಳಿ ಹೋಗಲ್ಲ, ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ ಎಂದು  ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಹಾಗೆಯೇ ನಟ ದರ್ಶನ್ ಬಿಡುಗಡೆ ವಿಚಾರ ಕೇಳಿ ಖುಷಿಯಾಯಿತು. ಸಹೋದರ ದಿನಕರ್ ಗೆ ಕರೆ ಮಾಡಿದ್ದೆ, ಸ್ವೀಟ್ ತೆಗೆದುಕೊಂಡು ಬರಲು ಹೇಳಿದ್ದೇನೆ ಎಂದು ಅವಧೂತ ಗುರೂಜಿ ತಿಳಿಸಿದ್ದಾರೆ.

ಇತ್ತೀಚೆಗೆ ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ, ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಟೈಮ್ ಸರಿಯಿಲ್ಲ. ಮುಂದೆ ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು  ಭವಿಷ್ಯ ನುಡಿದಿದ್ದರು.

Key words: Actor, Darshan, enter, politics, predicted