Wednesday, September 30, 2026

BDA Apartments

ಕ್ಯಾಮರಾ ಹಿಡಿದು ಮತ್ತೆ ಕಾಡಿನತ್ತ ಡಿ ಬಾಸ್ BDA JK_Adv BDA Adv
Home Cinema ಕ್ಯಾಮರಾ ಹಿಡಿದು ಮತ್ತೆ ಕಾಡಿನತ್ತ  ಡಿ ಬಾಸ್..

ಕ್ಯಾಮರಾ ಹಿಡಿದು ಮತ್ತೆ ಕಾಡಿನತ್ತ  ಡಿ ಬಾಸ್..

ಬೆಂಗಳೂರು,ಜ,27,2020(www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರೀಯ ಎನ್ನುವುದು ಎಲ್ಲರಿಗೂ ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಕೆಲಸಗಳ ನಡುವೆಯು ದಚ್ಚು ಪ್ರಾಣಿಗಳ ಜೊತೆ ಹೆಚ್ಚು ಕಾಲಕಳೆಯುತ್ತಾರೆ.

ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫಾರ್ಮ್ ಹೌಸ್ ಅಥವಾ ನೆಚ್ಚಿನ ಪ್ರಾಣಿಗಳ ಜತೆ ಕಾಲ ಕಳೆಯುವ ದರ್ಶನ್ ಇದೀಗ ಮತ್ತೆ ಕಾನನದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ದರ್ಶನ್ ಈ ಬಾರಿ ಕ್ಯಾಮರಾ ಹೆಗಲೇರಿಸಿಕೊಂಡು ಹೋಗಿದ್ದು ಉತ್ತರಖಂಡನ ಸತ್ತಾಲ್ ಕಡೆ.

ಸತ್ತಾಲ್ ನ ಸುಂದರ ತಾಣಗಳಲ್ಲಿ ಕ್ಯಾಮರಾ ಜೊತೆ ಸುತ್ತಾಡುತ್ತಿರುವ ದರ್ಶನ್ ಪಕ್ಷಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಖ್ಯಾತ ಫೋಟೋಗ್ರಾಫರ್ ಲೀಲಾ ಅಪ್ಪಾಜಿ ಜೊತೆ ದರ್ಶನ್ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿದ್ದಾರೆ.