ಮೈಸೂರು, ಆ.೧೪,೨೦೨೫: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟ ದರ್ಶನ್ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ಇದೀಗ ನಟ ಮತ್ತೆ ಜೈಲು ಸೇರಬೇಕಾಗಿದೆ.
ಚಿತ್ರರಂಗದಲ್ಲಿ ಶೂನ್ಯದಿಂದ ಉತ್ತುಂಗಕ್ಕೆ ಏರಿದ್ದ ನಟ ದರ್ಶನ್, ತಮ್ಮ ಸಹವಾಸ ದೋಷದಿಂದ ಚಿತ್ರರಂಗ ಹಾಗೂ ವೈಯಕ್ತಿಕ ಜೀವನದಲ್ಲಿ ಹಲವಾರು ಏರುಪೇರು ಕಾಣಬೇಕಾಯಿತು. ಈ ಪೈಕಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಉಹಿಸಲಾಗದ ಬೆಲೆ ತೆರಬೇಕಾಗಿದೆ.
ನಟ ದರ್ಶನ್ ವಿರುದ್ಧದ ಈ ತನಕ ದಾಖಲಾಗಿರುವ ಪ್ರಕರಣ ಹಾಗೂ ವಿವರ….
- ಸೆಪ್ಟೆಂಬರ್ 2011 – ಪತ್ನಿ ವಿರುದ್ಧ ಹಲ್ಲೆ (Attempted murder/domestic violence)
ಪತ್ನಿ ವಿಜಯಲಕ್ಷ್ಮಿ ಅವರ ದೂರು ಮೇಲು ದೃಷ್ಟಿಸಿದಂತೆ, ದರ್ಶನ್ ವಿರುದ್ಧ ದಂಡ ಸಂಹಿತೆಯ ಸೆಕ್ಷನ್ 498A ಮತ್ತು 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ; ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ 14 ದಿನ ಬಂಧಿತರಾಗಿದ್ದರು . ದಂಪತಿಗಳ ಮಧ್ಯೆ ಸಮ್ಮತಿಯಡಿ ವಿವಾದ ಅಂತಿಮಗೊಂಡಿತು.
- ಸೆಪ್ಟೆಂಬರ್ 2018 – ವಾಹನ ಅಪಘಾತ (SUV accident)
ನಟ ದರ್ಶನ್ ಮೈಸೂರಿನಲ್ಲಿ ತಮ್ಮ SUV ಕಾರಿನಲ್ಲಿ ತೆರಳುವಾಗ ರಿಂಗ್ ರಸ್ತೆಯಲ್ಲಿ ಅಪಘಾತಕ್ಕೀಡಾಗಬೇಕಾಯಿತು. ಘಟನೆಯಲ್ಲಿ ಕೈಮೂಳೆ ಮುರಿದು ಕೆಲ ದಿನಗಳ ವರೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
- ಜುಲೈ 2021 – ಹೋಟೆಲ್ ಸಿಬ್ಬಂದಿಗೆ ಹಲ್ಲೆ (Assault on waiter)
ಮೈಸೂರಿನ ಖಾಸಗಿ ಹೋಟೆಲಿನಲ್ಲಿ ವೈಟರ್ ಮೇಲೆ ಹಲ್ಲೆಗೆ ಸಂಬಂಧಿಸಿ ಆರೋಪ. ನಂತರ ದೂರು. ಬಳಿಕ ಮಾತುಕಡೆಯಿಂದ ಪ್ರಕರಣ ಮುಕ್ತಾಯ.
- ಅಕ್ಟೋಬರ್ 2023 – ನಾಯಿಗಳನ್ನು ಬಳಸಿ ಹಲ್ಲೆ (Dog attack on neighbor)
ಬೆಂಗಳೂರಿನ ಆರ್. ಆರ್.ನಗರದ ನಿವಾಸದ ಮುಂಭಾಗ ವಾಸವಿದ್ದ ಮಹಿಳೆ ಮೇಲೆ ನಟ ದರ್ಶನ್ ಸಾಕು ನಾಯಿಗಳನ್ನು ಛೂಬಿಟ್ಟು ತೊಂದರೆ ನೀಡಿದ ಆರೋಪ. ಈ ಬಗ್ಗೆ FIR ದಾಖಲಾಗಿದೆ.
- ಜನವರಿ 2023 – ಕಾನೂನು ವಿರುದ್ದದ ವನ್ಯಜೀವಿ (Bar-headed geese)
ಮೈಸೂರು ಸಮೀಪದ ತಿ.ನರಸೀಪುರ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ಪಕ್ಷಿಗಳನ್ನು ಕಾನೂನು ಬಾಹಿರವಾಗಿ ಸಾಕುತ್ತಿದ್ದ ದೂರಿನ ಮೇರೆಗೆ ಪ್ರಕರಣ ದಾಖಲು. ಕಾನೂನಿನ ಉಲ್ಲಂಘನೆ ಆರೋಪ. ಬಳಿಕ ಈ ಪಕ್ಷಿಗಳ ರಕ್ಷಣೆಗೊಳಿಸಲಾಗಿತ್ತು .
- ಜೂನ್ 2024 – ರೇಣುಕಾಸ್ವಾಮಿ ಹತ್ಯೆ ಪ್ರಕರಣ (Fan Murder Case)
ಚಿತ್ರದುರ್ಗದ ರೇಣುಕಸ್ವಾಮಿ ಎಂಬ 33-ವರ್ಷದ ಅಭಿಮಾನಿಯನ್ನು ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ 17 ಜನರು ಅಪಹರಣ, ಹಲ್ಲೆ, ಹತ್ಯೆ ಆರೋಪದಡಿ ಪ್ರಕರಣ ದಾಖಲು. ಸೆಕ್ಷನ್ 302 (ಹತ್ಯೆ), 201 ಹಾಗೂ ಇತರೆ ಸೆಕ್ಷನ್ಗಳು ಜತೆ FIR ದಾಖಲು.
ಆರೋಪ ಮತ್ತು ಬಂಧನ: ದರ್ಶನ್ ಮತ್ತು ಇತರರು 11 ಜೂನ್ 2024 ರಂದು ಬಂಧಿತರಾದರು .
ಕಾನೂನು ಪ್ರಗತಿ:
ಡಿಸೆಂಬರ್ 13, 2024: ಕರ್ನಾಟಕ ಹೈಕೋರ್ಟ್ನಿಂದ ದರ್ಶನ್ ಮತ್ತು ಇತರರಿಗೆ ಜಾಮೀನು ನೀಡಲಾಯಿತು .
ಜನವರಿ 2025: ಜಾಮೀನು ದೊರಕಿದ ನಂತರ ಬೆಂಗಳೂರು ಪೊಲೀಸರು ಅವರ ಗನ್ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ರದ್ದುಪಡಿಸಿ, ತಮ್ಮ ಶಸ್ತ್ರವನ್ನು ಪೊಲೀಸ್ ಠಾಣೆಗೆ ಸಲ್ಲಿಸಲು ಸೂಚಿಸಿದರು .
ಎಪ್ರಿಲ್ 22, 2025: ಸುಪ್ರೀಂ ಕೋರ್ಟ್ನಲ್ಲಿ ಈ ಜಾಮೀನು ಆದೇಶದ ವಿರುದ್ಧ ಕೋರ್ಟಿನಲ್ಲಿ ವಿಚಾರಣೆ ನಡೆಯಿತು .
ಏಪ್ರಿಲ್ 2025: ದರ್ಶನ್ ಹಿಂದಿನ ವೈದ್ಯಕೀಯ ಸಮಸ್ಯೆ (back pain) ಹೇಳಿ ವಿಚಾರಣೆ ತಪ್ಪಿಸಿಕೊಂಡರು. ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿತು.
ಜುಲೈ : ನಟ ದರ್ಶನ್ ಅವರು ಚಿತ್ರ ಶೂಟಿಂಗ್ಗಾಗಿ ಥೈಲೆಂಡ್ , ದುಬೈ, ಯುರೋಪ್ ಗೆ ತೆರಳಲು ನ್ಯಾಯಾಲಯದಿಂದ ಅನುಮತಿ ಪಡೆದರು .
ಜುಲೈ 2025: ಹೈಕೋರ್ಟ್ನ ಜಾಮೀನು ಆದೇಶವನ್ನು “perverse exercise of discretion” ಎಂದು ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿತು.
ಆಗಸ್ಟ್ 14, 2025: ಸುಪ್ರೀಂ ಕೋರ್ಟ್ ಹೈಕೋರ್ಟ್ನ ಜಾಮೀನು ಆದೇಶವನ್ನು ರದ್ದುಪಡಿಸಿತು. ಈ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಹಾಗೂ ಜೈಲಿನಲ್ಲಿ ಆರೋಪಿಗೆ ಯಾವುದೇ ವಿಶೇಷ ಸವಲತ್ತು ನೀಡದಂತೆ ಆದೇಶಿಸಿದೆ.
key words: Crimes, controversies, actor Darshan, Bail Cancelled, court
SUMMARY:
Crimes and controversies against actor Darshan.
Actor Darshan, who was accused in the Renukaswamy murder case, is now facing jail time after the Supreme Court cancelled his bail. Actor Darshan, who rose from zero to the top in the film industry, had to face many ups and downs in his film industry and personal life due to his bad association. Among these, actor Darshan has to pay an unimaginable price in the Renukaswamy murder case.