ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ನೀಡದ ಆರೋಪ: ಖುದ್ದು ಪರಿಶೀಲನೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು,ಅಕ್ಟೋಬರ್,6,2025 (www.justkannada.in):  ರೇಣುಕಾಸ್ವಾಮಿ  ಕೊಲೆ ‍ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ನೀಡದ ಆರೋಪ ಹಿನ್ನೆಲೆಯಲ್ಲಿ ಖುದ್ದಿ ಪರಿಶೀಲನೆ ನಡೆಸುವಂತೆ ಕೋರಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ನಟ ದರ್ಶನ್ ಪರ ವಕೀಲ ಸುನೀಲ್ ಅರ್ಜಿ ಸಲ್ಲಿಸಿದ್ದಾರೆ.  ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ. ಆದೇಶ ಪಾಲಿಸಿದ್ದೇವೆಂದು ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ.  ಹೀಗಾಗಿ ಖುದ್ದು ಪರಿಶೀಲಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ನಟ ದರ್ಶನ್ ಅವರನ್ನ ಕ್ವಾರಂಟೈನ್ ಸೆಲ್ ನಲ್ಲಿಟ್ಟಿದ್ದಾರೆ. ಸವಲತ್ತು ನೀಡಿಲ್ಲ.  ಸವಲತ್ತು ನೀಡಿಲ್ಲವೆಂದು ಆರೋಪಿಸಿದ್ದು, ಅರ್ಜಿ ವಿಚಾರಣೆಯನ್ನ ಕೋರ್ಟ್ ಅಕ್ಟೋಬರ್ 9ಕ್ಕೆ ಮುಂದೂಡಿಕೆ ಮಾಡಿದೆ.

Key words: Actor Darshan, minimum facilities, hearing, Court