ಡಿ.1ರೊಳಗೆ ರೇಸ್ ಕೋರ್ಸ್ ಸಂಸ್ಥೆ ಸರ್ಕಾರಕ್ಕೆ ನೀಡಬೇಕಾದ ಬಾಕಿ ವಸೂಲಿಗೆ ಕ್ರಮ-ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ನಿರ್ಧಾರ…

ಬೆಂಗಳೂರು,ನ,19,2019(www.justkannada.in): ಡಿಸಂಬರ್ 1 ನೇ ತಾರೀಖಿನ ಒಳಗೆ ರೇಸ್ ಕೋರ್ಸ ಸಂಸ್ಥೆಯು ಸರ್ಕಾರಕ್ಕೆ ನೀಡಬೇಕಾದ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಡಿಸಂಬರ್ 2 ರಿಂದ ಸ್ಥಗಿತಗೊಳಿಸಬೇಕೆಂದು ವಿಧಾನ ಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ರೇಸ್  ಕ್ಲಬ್‍ಗೆ ಕಡಿಮೆ ಬಾಡಿಗೆಯನ್ನು ನಿಗದಿ ಪಡಿಸಿರುವ ಮತ್ತು ಬೆಂಗಳೂರು ರೇಸ್ ಕೋರ್ಸ ಸಂಸ್ಥೆಯನ್ನು ತೆರವುಗೊಳಿಸುವ ಕುರಿತು. ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರು ನೀಡಿದ್ದ ವರದಿಯ ಕುರಿತು 12 ನೇ ವಿಧಾನ ಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನೀಡಿರುವ ಶಿಫಾರಸ್ಸುಗಳ ಅನುಸರಣಾ ವರದಿಯನ್ನು ವಿಧಾನ ಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ  ಇಂದಿನ ತನ್ನ ಸಭೆಯಲ್ಲಿ ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು.

ವಿಧಾನ ಸಭೆಯ ಅತ್ಯಂತ ಪ್ರಮುಖ ಸಮಿತಿಯಾಗಿರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಭಾರತದ ಲೆಕ್ಕ ನಿಯಂತ್ರ್ರಕರು ಮತ್ತು ಲೆಕ್ಕ ಪರಿಶೋಧಕರ ಅಡಿಟ್ ಆಕ್ಷೇಪಗಳನ್ನು ಪರಿಶೀಲಿಸಿ ಸುಧಾರಣಾತ್ಮಕ ಶಿಫಾರಸ್ಸುಗಳನ್ನು ಮಾಡುವ ಮತ್ತು ಶಿಫಾರಸ್ಸುಗಳ ಅನುಷ್ಠಾನವನ್ನು ಅನುಸರಣೆ ಮಾಡುವ  ಗುರುತರವಾದ ಜವಾಬ್ದಾರಿಯನ್ನು ಹೊಂದಿದೆ.

ಇಂದಿನ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಆಪರ ಮುಖ್ಯಕಾರ್ಯದರ್ಶಿ. ರಜನೀಶ ಗೋಯಲ್, ಕಾನೂನು ಇಲಾಖೆಯ ಕಾರ್ಯದರ್ಶಿ. ವಸ್ತ್ರದ ಮಠ, ಕಾರ್ಯದರ್ಶಿ .ಬಿ.ಗುರುಪ್ರಸಾದ ಮತ್ತು ಮುಖ್ಯ ಅಭಿಯಂತತರಾದ .ರಮೇಂದ್ರರವರು ಉಪಸ್ಥಿತರಿದ್ದರು,

ಕರ್ನಾಟಕ ಸರ್ಕಾರಕ್ಕೆ ಬೆಂಗಳೂರು ಟರ್ಪ ಕ್ಲಬ್ ಸಂಸ್ಥೆಯು ತನ್ನ ಒಟ್ಟಾರೆ ಆದಾಯದ ಶೇಕಡಾ 2 % ವಾರ್ಷಿಕ ಬಾಡಿಗೆ ಆಧಾರದಲ್ಲಿ 2010-11 ರಿಂದ 2017-18 ರವರೆಗೆ 32,86,99,102 ರೂಪಾಯಿಗಳ ಮೊತ್ತವನ್ನು  ಪಾವತಿ ಮಾಡಬೇಕಾಗಿವೆಂದು ಅಂದಾಜಿಸಲಾಗಿದೆ.

1989 ರಿಂದ 98 ರವರೆಗೆ ಪಾವತಿಸಬೇಕಾದ ಬಾಡಿಗೆಯನ್ನ ಸಹ ರೇಸ್ ಕೋರ್ಸ ಸಂಸ್ಥೆಯು ಪಾವತಿಸದೇ ಕೇವಲ ವಾರ್ಷಿಕ 5 ಲಕ್ಷ ರೂಪಾಯಿಗಳ ಬಾಡಿಗೆಯನ್ನು ಮಾತ್ರ ಪಾವತಿಸುತ್ತಾ ಬಂದಿರುವುದು ಇದರಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆವೆಂದು ಸಿಎಜಿ ವರದಿ ಮತ್ತು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ವರದಿಗಳು ಗಂಭೀರವಾದ ಮತ್ತು ತೀವ್ರ ಸ್ವರೂಪದ ಆಕ್ಷೇಪಗಳನ್ನು ವ್ಯಕ್ತ ಪಡಿಸಿದ್ದವು.

2009 ಕ್ಕೆ ರೇಸ್ ಕೋರ್ಸ ಲೀಜ್ ಅವಧಿಯು ಪೂರ್ಣ ಗೊಂಡಿದ್ದರು ಹಳೆ ದರದಲ್ಲಿ ರೇಸ್ ಸಂಸ್ಥೆಯವರು ಕೇವಲ 25,94 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ಪಾವತಿಸುತ್ತಿರುವುದನ್ನು ಸಭೆಯು ಗಂಭೀರವಾಗಿ ಪರಿಗಣಿಸಿತು.

2009 ರಿಂದ ಇಲ್ಲಿಯವೆಗೆ ರೇಸ್ ಕೋರ್ಸ ಸಂಸ್ಥೆಯು ಲೀಜ್ ಅವಧಿ ಮುಗಿದಿದ್ದರು ಈ ಸ್ಥಳವನ್ನು  ಅಕ್ರಮವಾಗಿ ಯಾವುದೇ ಕಾನೂನಾತ್ಮಕ ಅವಕಾಶವಿಲ್ಲದಿದ್ದದು ಮುಂದುವರೆದುಕೊಂಡು ಬಂದಿದೆ. 1968 ರಿಂದ ಇಲ್ಲಿಯ ವರೆಗಿನ ಎಲ್ಲಾ ಸರ್ಕಾರಗಳು ಈ ಜಾಗಯನ್ನು ಮರಳಿ ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ನಿರ್ಣಯಿಸುತ್ತಲೆ ಬಂದಿವೆ.

2010 ರಲ್ಲಿ ಕರ್ನಾಟಕ ಶ್ರೇಷ್ಠ  ನ್ಯಾಯಲಯವು ಸರ್ಕಾರದ ಪರವೇ ಆದೇಶ ಮಾಡಿ ಈ ಜಾಗವನ್ನು ಸರ್ಕಾರದ ವಶಕ್ಕೆ ನೀಡಿದೆ ಸವೋಚ್ಛ ನ್ಯಾಯಲಯದಲ್ಲಿ ಪ್ರಕರಣ ಬಾಕಿವಿದೆಂದು ಸಬೂಬು ಹೇಳುತ್ತಾ ಅಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ವಿಳಂಬ ಮಾಡಿದ್ದನ್ನು ಇಂದಿನ ಸಭೆಯಲ್ಲಿ ಗಂಭೀರ ಪರಿಗಣಿಸಲಾಯಿತು.

ಆದ್ದರಿಂದ ಈ ಕೆಳಕೆಂಡ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಂಡು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ನಿರ್ದೇಶನಗಳನ್ನು ಸರ್ಕಾರದ ಆಪರ ಮುಖ್ಯ ಕಾರ್ಯದರ್ಶಿರವರಿಗೆ ತಿಳಿಸಲಾಯಿತು.

  1. ಈ ವರ್ಷದ ಡಿಸಂಬರ್ 1 ನೇ ತಾರೀಖಿನ ಒಳಗೆ ರೇಸ್ ಕೋರ್ಸ ಸಂಸ್ಥೆಯು ಸರ್ಕಾರಕ್ಕೆ ನೀಡಬೇಕಾದ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಡಿಸಂಬರ್ 2 ರಿಂದ ಸ್ಥಗಿತಗೊಳಿಸಬೇಕೆಂದು ಸಮಿತಿಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
  2. ಸವೋಚ್ಛ ನ್ಯಾಯಲಯದಲ್ಲಿ ಬಾಕಿ ವಿರುವ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಅಗತ್ಯದ ಎಲ್ಲಾ ಕಾನೂನು ಕ್ರಮಗಳನ್ನು 1 ತಿಂಗಳ ಒಳಗಾಗಿ ಸರ್ಕಾರದ ವತಿಯಿಂದ ಕೈಗೊಳ್ಳಬೇಕೆಂದು ನಿರ್ದೇಶಿಸಲಾಯಿತು.
  3. ಡಿಸಂಬರ್ ಅತ್ಯಂತ ವೇಳೆಗೆ ಕೈಗೊಂಡ ಎಲ್ಲಾ ಕ್ರಮಗಳ ಸವಿಸ್ತಾರವಾದ ವರದಿಯನ್ನು ಸಮಿತಿಯ ಸಭೆಯಲ್ಲಿ ಮಂಡಿಸಬೇಕೆಂದು ಸೂಚಿಸಲಾಯಿತು.

Key words: Action -Race Course – Dues- Government –assembly-Public Accounting Committee