ಧಮ್ ಇದ್ರೆ ತಾಕತ್ತಿದ್ದರೇ ಶಾಸಕ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಲಿ- ಬಿಜೆಪಿಗೆ ಬಿ.ಕೆ ಹರಿಪ್ರಸಾದ್ ನೇರ ಸವಾಲು.

ಬಾಗಲಕೋಟೆ, ಜನವರಿ,18,2023(www.justkannada.in):  ತಮ್ಮ ಪಕ್ಷದವರ ವಿರುದ್ಧವೇ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತಾಕತ್ತಿದ್ದರೇ ಸಿಎಂ ಬೊಮ್ಮಾಯಿ ಮತ್ತು ಹೈಕಮಾಂಡ್ ಕ್ರಮ ಕೈಗೊಳ್ಳಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿ ಪ್ರಸಾದ್ ನೇರ ಸವಾಲು ಹಾಕಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿ  ಸ್ಯಾಂಟ್ರೋ ರವಿಗೂ ಕಾಂಗ್ರೆಸ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಸಚಿವ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್,  ಮುನಿರತ್ನ ನನ್ನ ಗರಡಿಯಲ್ಲಿ ಬೆಳೆದವ. ಆತ ಏನೆಂದು ನನಗೆ ಗೊತ್ತು. ಸಪ್ಲೈ ಮಾಡಿ ಮಂತ್ರಿಗಳಾಗಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಇನ್ನೊಬ್ಬ ಶಾಸಕ ಪಿಂಪ್ ಕೆಲಸ ಮಾಡಿ ಮಂತ್ರಿಯಾಗಿದ್ದಾರೆ ಎಂದಿದ್ದಾರೆ.  ವಲಸಿಗರು ಮಂತ್ರಿಯಾಗಲು ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಅದನ್ನ ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲ್ಲ ಎಂದರು.

ಇಂದಲ್ಲಾ ನಾಳೆ ಬಿಜೆಪಿಯವರಿಗೆ ಜನರು ಬುದ್ದಿ ಕಲಿಸುತ್ತಾರೆ. ನಾನು ಹಿಂಬಾಗಿಲ ಮೂಲಕ ಬಂದವನು ಎನ್ನುತ್ತಾರೆ. ಇವರಂತೆ ಸಿ ಗ್ರೇಡ್ ಬಾಗಿಲಿನಿಂದ ಬಂದವನಲ್ಲ. ಆದರೆ ನಾನು ರಾಜಮಾರ್ಗದಿಂದ ಬಂದವನು. ಇವರಂತೆ ಬಣ್ಣ ಬದಲಾಯಿಸುವ ರಾಜಕೀಯ ಗೋಸುಂಬೆ  ನಾನು ಅಲ್ಲ. ಧಮ್ ಇದ್ರೆ ತಾಕತ್ತಿದ್ದರೇ ಯತ್ನಾಳ್ ವಿರುದ್ದ ಸಿಎಂ ಬಿಜೆಪಿ ಹೈಕಮಾಢ್ ಕ್ರಮ ತೆಗೆದುಕೊಳ್ಳಲಿ ಎಂದು ಸವಾಲೆಸೆದರು.

Key words: action-against -Yatnal – BK Hariprasad -challenge – BJP