ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿ ಪವಿತ್ರಾಗೌಡ ಅಸ್ವಸ್ಥ:ಆಸ್ಪತ್ರೆಗೆ ದಾಖಲು.

ಬೆಂಗಳೂರು,ಜೂನ್,18,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿಯಾಗಿರುವ  ಪವಿತ್ರಾ ಗೌಡ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿರುವ  ಪವಿತ್ರಾಗೌಡಗೆ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಅನ್ನಪೂರ್ಣೇಶ್ವರಿ ಪೊಲೀಸ್ಠಾಣೆಗೆ ಆಗಮಿಸಿದ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಿ ನಂತರ ಆಸ್ಪತ್ರೆಗೆ ದಾಖಲು ಮಾಡಲು ಸೂಚನೆ ನೀಡಿತ್ತು. ಅಂತೆಯೇ ಪವಿತ್ರಾ ಗೌಡರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳನ್ನ ಕರೆದೊಯ್ದು ಸ್ಥಳಮಹಜರು ಮಾಡಿ ಸಾಕ್ಷ್ಯ ಮಹತ್ವದ ಮಾಹಿತಿ, ದಾಖಲೆಗಳನ್ನ ಸಂಗ್ರಹಿಸುತ್ತಿದ್ದಾರೆ.

Key words: accused, Pavitra Gowda, sick, admitted, hospital