ಮಗುವನ್ನ ಅಪಹರಿಸಿದ್ದ ಆರೋಪಿ ತಮಿಳುನಾಡಿನಲ್ಲಿ ಅಂದರ್ : ಮರಳಿ ತಾಯಿ ಮಡಿಲು ಸೇರಿದ ಬೆಂಗಳೂರು ಬಾಲಕಿ…

ಕನ್ಯಾಕುಮಾರಿ,ಅಕ್ಟೋಬರ್,1,2020(www.justkannada.in):  ಕರ್ನಾಟಕದ ಬೆಂಗಳೂರು ಮೂಲದ ಬಾಲಕಿ ಮತ್ತು ಕೇರಳ ಮೂಲದ ಮತ್ತೊಂದು ಮಗುವನ್ನು ಅಪಹರಿಸಿದ್ದ ಆರೋಪಿಯು ಕನ್ಯಾಕುಮಾರಿ ಜಿಲ್ಲೆಯ ಕಾಳಿಕಾವಿಲೈ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.accused-kidnappers-arrest-child-tamilunadu-kanyakumari-bangalore

ಕೇರಳದ ತಿರುವನಂತಪುರಂ ಬಳಿಯ ಕಟ್ಟಕ ಮೂಲದ 54 ವರ್ಷದ ಜೋಸೆಫ್ ಜಾನ್ ಬಂಧಿತ ಆರೋಪಿ. ಈತ ಕನ್ಯಾಕುಮಾರಿ ಜಿಲ್ಲೆಯ ಕಯ್ಯಾರಕವಿಲೈ ಬಸ್ ನಿಲ್ದಾಣದ ಬಳಿ ನಿನ್ನೆ ಮುಂಜಾನೆ ಅಪಹರಿಸಿದ್ದ ಇಬ್ಬರು ಮಕ್ಕಳ ಜತೆ ಇದ್ದನು. ಈ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

ಈ ನಡುವೆ ಬೆಂಗಳೂರಿನ ಬಾಲಕಿ ಲೋಹಿದಾ ಮತ್ತು ಕೇರಳ ಮೂಲದ ಮತ್ತೊಂದು ಮಗುವನ್ನು ಈತ ಅಪಹರಿಸಿದ್ದನು ಎನ್ನಲಾಗಿದೆ. ಕರ್ನಾಟಕದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬಾಲಕಿಯನ್ನು ಅಪಹರಿಸಿದ ಎಂದು ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ಅಪಹರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಕಾರ್ತಿಕೇಶ್ವರಿ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.accused-kidnappers-arrest-child-tamilunadu-kanyakumari-bangalore

ಆರೋಪಿ ಕನ್ಯಾಕುಮಾರಿ ಜಿಲ್ಲೆಯ ಕಾಳಿಕಾವಿಲೈ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮಗು ಪತ್ತೆಯಾದ ವಿಚಾರ ತಿಳಿದ ಕೂಡಲೇ ಕರ್ನಾಟಕ ಪೊಲೀಸರು ಮಗುವಿನ ತಾಯಿಯೊಂದಿಗೆ ಕಾಳಿಕಾವಿಲೈಗೆ ತೆರಳಿದ್ದರು.  ನಂತರ ತಮಿಳುನಾಡು ಪೊಲೀಸರು ಮಗು ಮತ್ತು ಆರೋಪಿಯನ್ನು ಬೆಂಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

Key words:  accused – kidnappers –arrest-child –tamilunadu-kanyakumari-Bangalore