ಕಳೆದ 8 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ…

ಮೈಸೂರು, ಸೆಪ್ಟಂಬರ್,2,2020(www.justkannada.in):  ಟಿಬೆಟ್ ಯುವಕನ ಕೊಲೆಗೆ ಯತ್ನಿಸಿ ಕಳೆದ ಎಂಟು ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.jk-logo-justkannada-logo

ಎಂಟು ವರ್ಷದ ಹಳೆಯ ಕೇಸ್ ಅನ್ನ ಮೈಸೂರು ದೇವರಾಜ ಠಾಣಾ ಪೊಲೀಸರು ಪತ್ತೆ ಮಾಡಿದ್ದಾರೆ. ಸಲೀಂಪಾಷ, ಸಲ್ಮಾನ್ ಪಾಷಾ , ಇಸ್ಮೈಲ್ ಖಾನ್ ಬಂಧಿತ ಆರೋಪಿಗಳು.

ಈ ಕುರಿತು ಮಾತನಾಢಿ ಮಾಹಿತಿ ನೀಡಿದ ಡಿಸಿಪಿ ಪ್ರಕಾಶ್ ಗೌಡ, ಕಳೆದ ಎಂಟು ವರ್ಷಗಳ ಹಿಂದೆ ಟಿಬೆಟ್ ಯುವಕ ತನ್ ಜಿನ್ ದರ್ಗ್ಯಾಲ್ ನನ್ನ ಡ್ರ್ಯಾಗರ್ ನಿಂದ ಚುಚ್ಚಿ ಕೊಲೆ ಯತ್ನ ನಡೆದಿತ್ತು. ಜನಾಂಗೀಯ ನಿಂದನೆ ಹಿನ್ನೆಲೆ ಮೈಸೂರಿನಲ್ಲಿ ಕೊಲೆಯತ್ನ ನಡೆದಿತ್ತು. ಬರ್ಮಾದಲ್ಲಿ ರೋಹಿಂಗ್ಯ ಗಲಾಟೆ ಪ್ರೇರಿತರಾಗಿ ಆರೋಪಿಗಳು ಮೈಸೂರಿ‌ನಲ್ಲಿ ಟಿಬೇಟ್ ಯುವಕನ ಕೊಲೆಗೆ ಯತ್ನಿಸಿದ್ದರು. ಇದಾದ ಬಳಿಕ‌ ಕೊಲೆ ಆರೋಪಿಗಳು ತಪ್ಪಿಸಿಕೊಂಡಿದ್ದರು‌. ಕಳೆದ ಎಂಟು ವರ್ಷಗಳಿಂದ ದುಬೈ ಹಾಗೂ ಕೆಲ ಕಾಲ ಬೆಂಗಳೂರಿನಲ್ಲಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದೀಗ ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ದೇವರಾಜ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.accused-arrest-after-8-years-mysore-police

ಈ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸದ್ಯ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನ ಬಂಧಿಸುವಲ್ಲಿ ದೇವರಾಜ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.

 

Key words:  accused –arrest-after-8 years -mysore police