ಮೈಸೂರಿನಲ್ಲಿ ಟಿಂಬರ್ ಮಳಿಗೆಗೆ ಆಕಸ್ಮಿಕ ಬೆಂಕಿ.

ಮೈಸೂರು,ಮಾರ್ಚ್,18,2024(www.justkannada.in): ಟಿಂಬರ್ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಪದಾರ್ಥಗಳು ಬೆಂಕಿಗಾಹುತಿಯಾಗಿರುವ ಘಟನೆ  ಮೈಸೂರಿನ ಆಂದೋಲನ ವೃತ್ತ ಬಳಿ  ನಡೆದಿದೆ.

ಆಂದೋಲನ ವೃತ್ತದ ಬಳಿ ಇರುವ ಯೂಸ್ರಾ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ  ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ  ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಕುವೆಂಪುನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words:  Accidental- fire – timber shop – Mysore.