ನಂಜನಗೂಡು-ಊಟಿ ಹೆದ್ದಾರಿ ಬಳಿ ಅಪಘಾತ: ಇಬ್ಬರು ಸಾವು

ಮೈಸೂರು, ಅಕ್ಟೋಬರ್ 19, 2020 (www.justkannada.in): ನಂಜನಗೂಡು-ಊಟಿ ಹೆದ್ದಾರಿಯ ಎಲಚಗೆರೆ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ನಂಜನಗೂಡಿನ ಕೂಡ್ಲಾಪುರ ಗ್ರಾಮದ ನಾಗರಾಜು(38), ಪುಟ್ಟಸ್ವಾಮಿ (56) ಮೃತರು.
ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ದೌಡಾಯಿಸಿದ ನಂಜನಗೂಡು ಸಂಚಾರ ಠಾಣೆ ಪೊಲೀಸರು ಬೊಲೆರೊ ವಾಹನದ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.