Tuesday, November 17, 2026

Dasara Wishes

ಭೀಕರ ಅಪಘಾತ: ಪತಿ-ಪತ್ನಿ ಸ್ಥಳದಲ್ಲೇ ಸಾವು DasraWishes_JK DasraWishes JK
Happy Dasara
Home Crime ಭೀಕರ ಅಪಘಾತ: ಪತಿ-ಪತ್ನಿ ಸ್ಥಳದಲ್ಲೇ ಸಾವು

ಭೀಕರ ಅಪಘಾತ: ಪತಿ-ಪತ್ನಿ ಸ್ಥಳದಲ್ಲೇ ಸಾವು

ಭೀಕರ ಅಪಘಾತ puli

ಚಿಕ್ಕಬಳ್ಳಾಪುರ,ನವೆಂಬರ್,28,2024 (www.justkannada.in): ಚಿಂತಾಮಣಿ ನಗರದ ಆದರ್ಶ ಚಿತ್ರ ಮಂದಿರದ ಮುಂಭಾಗದಲ್ಲಿ ಕೆಎಸ್ಆರ್ ಟಿ ಸಿ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತವಾಗಿದ್ದು ಪತಿ-ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಬುರುಡುಗುಂಟೆ ಪಂಚಾಯತಿ ವ್ಯಾಪ್ತಿಯ  ಕೊಮ್ಮಸಂದ್ರ ಗ್ರಾಮದ ನಿವಾಸಿ ವೆಂಕಟೇಶಪ್ಪ (39) ಮತ್ತು ಪತ್ನಿ ಸರಸ್ವತಮ್ಮ (35) ಮೃತಪಟ್ಟವರು ಎಂದು ತಿಳಿದುಬಂದಿದೆ.

ಗಂಡ ಮತ್ತು ಹೆಂಡತಿ ಇಬ್ಬರೂ ಚಿಂತಾಮಣಿ ತಾಲೂಕಿನ ನಾರಾಯಣಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇಡುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ರಸ್ತೆ ಮಾರ್ಗವಾಗಿ ಈ ಘಟನೆ ನಡೆದಿದೆ  ಎಂದು ತಿಳಿದುಬಂದಿದೆ.

ಶಿಡ್ಲಘಟ್ಟ ರಸ್ತೆಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದಲ್ಲಿ ಪತಿ ಮತ್ತು ಪತ್ನಿ ಕೊಮ್ಮಸಂದ್ರ ಗ್ರಾಮದಿಂದ ಚಿಂತಾಮಣಿಯ ಕಡೆಯಿಂದ ತಾಲ್ಲೂಕಿನ ಹೊರವಲಯದ ನಾರಾಯಣಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಇನ್ನೂ ಘಟನ ಸ್ಥಳಕ್ಕೆ ಡಿವೈಎಸ್ಪಿ ಪಿ. ಮುರಳಿಧರ್, ನಗರ ಸರ್ಕಲ್ ಇನ್ಸ್ ಪೆಕ್ಟರ್ ವಿಜಿ ಕುಮಾರ್ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಮತಾ ಭೇಟಿ ನೀಡಿ ಸ್ಥಳದಲ್ಲಿ ಮೃತಪಟ್ಟಿದ್ದ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Key words:  accident, Husband, wife, die.  on the spot