ಮಂಡ್ಯ,ಸೆಪ್ಟಂಬರ್,26,2025 (www.justkannada.in): ಸ್ಕೈ ವಾಕ್ ಕಂಬಕ್ಕೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಮಹಿಳಾ ಕಾಲೇಜು ಬಳಿ ಈ ಘಟನೆ ನಡೆದಿದೆ. ಡ್ಯಾನಿಲ್ (20) ಹಾಗೂ ಜೋಶ್ (20) ಮೃತ ಯುವಕರು. ಮೃತರು ಮಂಡ್ಯದ ಉದಯಗಿರಿ ಹಾಗೂ ಯತ್ತಗದಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ.
ಮಹಿಳಾ ಕಾಲೇಜು ಬಳಿ ಹೊಸದಾಗಿ ನಿರ್ಮಾಣವಾಗಿರುವ ಸ್ಕೈವಾಕರ್ ಗೆ ವೇಗವಾಗಿ ಬಂದ ಬೈಕ್ ಅಪ್ಪಳಿಸಿದ್ದು, ಡಿಕ್ಕಿ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರೂ ಬೆಂಗಳೂರಿನಿಂದ ಮಂಡ್ಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಸಂಭವಿಸಿದೆ. ಮಂಡ್ಯ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: accident, Bike, Two youths, die, Mandya