ವಿಚಾರಣೆಗೆ ಗೈರು: ಮೂವರು ಅತೃಪ್ತ ಶಾಸಕರಿಂದ ಸ್ಪೀಕರ್ ಗೆ ಪತ್ರ…

ಬೆಂಗಳೂರು,ಜು,17,2019(www.justkannada.in): ಇಂದು ಸ್ಪೀಕರ್ ಎದುರು ವಿಚಾರಣೆಗೆ ಮೂವರು ಅತೃಪ್ತ ಶಾಸಕರು ಗೈರಾಗಿದ್ದು ಬೇರೆ ದಿನ ನಿಗದಿ ಮಾಡುವಂತೆ ಪತ್ರ ಬರೆದಿದ್ದಾರೆ.

ಮೂವರು ಅತೃಪ್ತ ಶಾಸಕರಾದ ರೋಷನ್ ಬೇಗ್, ಡಾ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಇಂದು ಸ್ಪೀಕರ್ ಎದುರು ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಹಾಜರಾಗಲು ಆಗಲ್ಲ. ಬೇರೆ ದಿನಾಂಕ ನಿಗದಿ ಮಾಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ರೋಷನ್ ಬೇಗ್, ಎಂಟಿಬಿ ನಾಗರಾಜ್ ತಮ್ಮ ಆಪ್ತರ ಮೂಲಕ ಸ್ಪೀಕರ್ ಕಚೇರಿಗೆ ಪತ್ರ ರವಾನಿಸಿದರೇ ಶಾಸಕ ಡಾ.ಸುಧಾಕರ್ ಇ-ಮೇಲ್ ಮೂಲಕ ಸ್ಪೀಕರ್ ಗೆ ಪತ್ರ ಕಳುಹಿಸಿದ್ದಾರೆ. ಅತೃಪ್ತ ಶಾಸಕ ರೋಷನ್ ಬೇಗ್ ತಮಗೆ ಹಲ್ಲು ನೋವಿದ್ದು ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಾರಣ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Absent – Letter – three- rebel MLA- speaker.