ವಿಶ್ವಾಸಮತಯಾಚನೆ ವೇಳೆ ಗೈರು ವಿಚಾರ; ಸುದ್ದಿಗೋಷ್ಠಿ ನಡೆಸಿ ಬಿಎಸ್ ಪಿ ಶಾಸಕ ಎನ್. ಮಹೇಶ್ ಹೇಳಿದ್ದೇನು…?

ಬೆಂಗಳೂರು,ಜು,24,2019(www.justkannada.in):  ವಿಶ್ವಾಸಮತಯಾಚನೆ ವೇಳೆ ತಟಸ್ಥವಾಗಿರುವಂತೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಸೂಚಿಸಿದ್ದರು. ಹೀಗಾಗಿ ನಾನು ವಿಶ್ವಾಸಮತಯಾಚನೆ ವೇಳೆ ಹಾಜರಾಗಿರಲಿಲ್ಲ ಎಂದು ಬಿಎಸ್ ಪಿ ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ ಪಿ ಶಾಸಕ ಎನ್. ಮಹೇಶ್, ವಿಶ್ವಾಸಮತಯಾಚನೆಗೆ ನಾನು ಹಾಜರಾಗಿರಲಿಲ್ಲ. ಹೀಗಾಗಿ ಸಂಜೆ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಪಕ್ಷದ ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ, ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಎಲ್ಲೋ ಸಂವಹನ ಲೋಪ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದರು.

ವಿಧಾನಸಭೆ ಚುನಾವಣೆಯಲ್ಲಿ  ಬಿಎಸ್ ಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ ಕೊಳ್ಳೆಗಾಲದಲ್ಲಿ ನಾನು ಗೆದ್ದೆ. ಬಳಿಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಕಾಂಗ್ರೆಸ್ ಜೆಡಿಎಸ್ ಬಿಎಸ್ ಪಿ ಮೈತ್ರಿ ಮಾಢಿಕೊಂಡು  ಅಧಿಕಾರಕ್ಕೆ ಬಂದವು. ಆ ವೇಳೆ ನನಗೆ ಮಂತ್ರಿ ಸ್ಥಾನವೂ ಸಿಕ್ಕಿತು. ಸಚಿವನಾದ ನಾಲ್ಕು ತಿಂಗಳ ನಂತರ  ಮಾಯಾವತಿ ಅವರು ನನಗೆ ರಾಜೀನಾಮೆ ನೀಡು ಅಂದರು. ಆ ಸಮಯದಲ್ಲಿ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಆದರೆ ರಾಜೀನಾಮೆ ಪಡೆಯಲು ಹೆಚ್,ಡಿ ಕುಮಾರಸ್ವಾಮಿ ಒಪ್ಪಿರಲಿಲ್ಲ ನಾಲ್ಕು ದಿನದ ಬಳಿಕ ರಾಜೀನಾಮೆ ಅಂಗೀಕರಿಸಿದರು ಎಂದರು.

ನಂತರ ವಿಶ್ವಾಸ ಮತಯಾಚನೆ ವೇಳೆ ತಟಸ್ಥವಾಗಿರುವಂತೆ ಸೂಚಿಸಿದ್ದರು. ಅದರಂತೆ ನಾನು ಗೈರಾಗಿದ್ದೆ. ಆದರೆ ಸಂಜೆ ನೋಡಿದಾಗ ನನ್ನನ್ನ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಕಂಡು ಬಂತು ಎಂದು ಎನ್. ಮಹೇಶ್ ತಿಳಿಸಿದರು.

ಜುಲೈ 16 ತಾರಿಖಿನಿಂದ ವಿಧಾನಸಭೆಗೆ ಹೋಗಿಯೇ ಇಲ್ಲ. ಆದರೆ ಜು.24 ರಂದು ಬೆಳಿಗ್ಗೆ ಬಂದು ನೋಡಿದಾಗ ಗೊತ್ತಾಯ್ತು ನನ್ನ ಉಚ್ಛಾಟನೆ ಮಾಡಿದ್ದಾರೆ ಅಂತ. ನಾನು ಯಾವ ಆದೇಶವನ್ನೂ ಉಲ್ಲಂಘನೆ ಮಾಡಿಲ್ಲ

ಹೈಕಮಾಂಡಿಗೆ ಬದ್ಧವಾಗಿದ್ದೆ. ಎಲ್ಲೋ ಸಂವಹನ ಲೋಪವಾಗಿದೆ, ಸರಿಪಡಿಸಿಕೊಳ್ಳುತ್ತೇವೆ” ಎಂದು ಮಹೇಶ್ ಹೇಳಿದರು. ಇನ್ನು ನಾನು ಪಕ್ಷ ಬಿಡಲ್ಲ, ಬಿಎಸ್ ಪಿಯಲ್ಲೇ ಇರ್ತೇನೆ ಎಂದರು.

 

Key words: Absent – BSP MLA -Mahesh –vote of confidence-bangakore