ರಾಜ್ಯ ಸರ್ಕಾರ ನೇಮಿಸಿರುವ ಎರಡು ತನಿಖಾ ತಂಡವನ್ನೂ ರದ್ದು ಮಾಡಿ – ಆರ್.ಧೃವನಾರಾಯಣ್ ಆಗ್ರಹ..

ಚಾಮರಾಜನಗರ,ಮೇ,11,2021(www.justkannada.in): ಆಕ್ಸಿಜನ್ ಸಿಗದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ಎರಡು ತನಿಖಾ ತಂಡವನ್ನೂ ರದ್ಧು ಮಾಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್ ಆಗ್ರಹಿಸಿದ್ದಾರೆ.jk

ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಸರ್ಕಾರದ ತನಿಖಾ ತಂಡ ರದ್ದು ಮಾಡಿ. ಕಾನೂನು ಸೇವಾ ಪ್ರಾಧಿಕಾರದ ಸಮ್ಮುಖದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾರ್ಯಾಂಗ ಸಂಪೂರ್ಣ ವಿಫಲವಾಗಿದೆ. ಶಾಸಕಾಂಗ ಸಹ ವಿಫಲವಾಗಿದೆ.  ಎರಡು ಅಂಗಗಳ ವಿಫಲದ ನಂತರ ನ್ಯಾಯಾಂಗ ಮಧ್ಯಪ್ರವೇಶ ಮಾಡಿದೆ.abolish-investigation-team-appointed-state-government-congress-r-dhruvanarayan

ರಾಜ್ಯ ಬಿಜೆಪಿ ಸಂಸದರಿಗೆ ಧ್ವನಿ ಇಲ್ಲದಂತಾಗಿದೆ.  ಕೇಂದ್ರದಿಂದ  ಆಕ್ಸಿಜನ್ ಪೂರೈಕೆಯಲ್ಲಿ ಅನ್ಯಾಯವಾಗಿದೆ, ಜಿಎಸ್ ಟಿ ಹಣ ಕೊಡುವಲ್ಲಿ ಅನ್ಯಾಯವಾಗಿದೆ. ವ್ಯಾಕ್ಸಿನ್  ನೀಡುವಲ್ಲಿ, ಪರಿಹಾರ ಕೊಡುವಲ್ಲಿಯೂ ಕೇಂಧ್ರದಿಂದ ಅನ್ಯಾಯವಾಗುತ್ತಿದೆ. ಇಷ್ಟಲ್ಲಾ ಆದರೂ ರಾಜ್ಯ ಬಿಜೆಪಿ ಸಂಸದರು ಮಾತ್ರ ಮೌನವಾಗಿರುವುದು ದುರಾದೃಷ್ಟ. ಆದರೆ ಹೈಕೋರ್ಟ್ ಸುಪ್ರೀಂಕೋರ್ಟ್ ನಿಂದಾಗಿ ನ್ಯಾಯ ಸಿಕ್ಕಿದೆ ಎಂದು ಆರ್.ಧೃವನಾರಾಯಣ್ ಚಾಟಿ ಬೀಸಿದರು.

Key words: abolish -investigation team -appointed – state government-congress- R. Dhruvanarayan