ವಿಜಯ್ ಹಜಾರೆ ಟ್ರೋಫಿ: ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಕನ್ನಡಿಗ ಅಭಿಮನ್ಯು ಮಿಥುನ್

ಬೆಂಗಳೂರು, ಅಕ್ಟೋಬರ್ 26, 2019 (www.justkannada.in): ವಿಜಯ್ ಹಜಾರೆ ಟ್ರೋಫಿ ಪೈನಲ್’ನಲ್ಲಿ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

49.3, 49.4, 49.5ನೇಎಸೆತದಲ್ಲಿ ಕ್ರಮವಾಗಿ ಶಾರುಖ್ ಖಾನ್, ಎಂ.ಮೊಹಮ್ಮದ್ ಹಾಗೂ ಮುರುಗನ್ ಅಶ್ವಿನ್​ಔಟ್ ಮಾಡುವ ಮೂಲಕ ವಿಜಯ್ ಹಜಾರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಕನ್ನಡಿಗ ಎನ್ನುವ ಕೀರ್ತಿಗೆ ಪಾತ್ರರಾದರು.

ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ರಾಟ್ರಿಕ್ ಸಂಪಾದಿಸಿದ ಎರಡನೇ ಆಟಗಾರ ಎನ್ನುವ ಗೌರವಕ್ಕೂ ಮಿಥುನ್ ಪಾತ್ರರಾಗಿದ್ದಾರೆ. ಮುರಳಿ ಕಾರ್ತಿಕ್ ಮೊದಲು ಈ ಸಾಧನೆ ಮಾಡಿದ ಕ್ರಿಕೆಟಿಗ.