Friday, August 21, 2026

BDA Apartments

Home Front Page ಶಾಸಕ ರಾಮದಾಸ್ ಗೆ ಕಿರುಕುಳ ನೀಡುವಷ್ಟು ಶಕ್ತಿವಂತ ನಾನಲ್ಲ- ಸಂಸದ ಪ್ರತಾಪ್ ಸಿಂಹ.

ಶಾಸಕ ರಾಮದಾಸ್ ಗೆ ಕಿರುಕುಳ ನೀಡುವಷ್ಟು ಶಕ್ತಿವಂತ ನಾನಲ್ಲ- ಸಂಸದ ಪ್ರತಾಪ್ ಸಿಂಹ.

ಮೈಸೂರು,ನವೆಂಬರ್,17,2022(www.justkannada.in): ಮೈಸೂರಿನಲ್ಲಿ ಬಸ್ ನಿಲ್ದಾಣ ಶೆಲ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲೇ ನನಗೆ ಕಿರುಕುಳವಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಎಸ್.ಎ ರಾಮದಾಸ್ ಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಇಲ್ಲಿ ರಾಜಕಾರಣಿಗಳ ಬಳಿ ನನ್ನನ್ನೇ ಸುಡುವಷ್ಟು ಹಣವಿದೆ.  ಪ್ರಧಾನಿ ಮೋದಿಯಿಂದ ಬೆನ್ನು ತಟ್ಟಿಸಿಕೊಂಡವರಿಗೆ ಕಿರುಕುಳ ಕೊಡವಷ್ಟು ದೊಡ್ಡವನು ನಾನಲ್ಲ.  ರಾಮದಾಸ್ ಅವರಿಗೆ ಕಿರುಕುಳ ಕೊಡುವಷ್ಟು ಶಕ್ತ ನನಗೆಲ್ಲಿದೆ ಹೇಳಿ..  ನಾನು ಅಭಿವೃದ್ದಿಗಾಗಿ ರಾಜಕಾರಣ ಮಾಡುತ್ತೇನೆ . ಈ ಹಿಂಧೆ ಶಾಸಕ ರಾಮದಾಸ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಬಾಬ್ರಿ ಮಸೀದಿ ದ್ವಂಸ ಬಳಿಕ ಬಿಜೆಪಿಗೆ ಬಂದರು. ರಾಮದಾಸ್ ಗೆ ಕಿರುಕುಳ ಆಗುತ್ತೆ ಎಂದು ಹೇಳಿದ್ದಾರೆ. ಯಾವ  ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಗುಂಬಾಜ್ ಒಡೆದರೇ ಟಿಪ್ಪು ಅನುಯಾಯಿಗಳಿಗೆ ಕಿರಿಕಿರಿಯಾಗಬೇಕು. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಆಗಲ್ಲ ಎಂದು ಟಾಂಗ್ ನೀಡಿದರು.

ನಾನು ಈವರೆಗೆ ಅಂದುಕೊಂಡಿದ್ದನ್ನ ಸಾಧಿಸಿದ್ದೇನೆ.  ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಿಸಿದ್ದೇನೆ. ಮಹಿಷಾ ದಸರಾ ಆಚರಣೆಯನ್ನೂ ನಿಲ್ಲಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ನನ್ನ ಹೇಳಿಕೆಗೆ ಬದ್ಧ.  ಅನಧಿಕೃತ ಗುಂಬಜ್ ತೆರವು ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Key words: not –strong- enough – MLA- Ramdas-MP-Prathap simha