Saturday, September 12, 2026

BDA Apartments

Home Front Page ಸಿದ‍್ಧರಾಮಯ್ಯರನ್ನ ಡಿಕೆಶಿ ಮತ್ತು ಪರಮೇಶ್ವರ್ ಅವರೇ ಸೋಲಿಸುತ್ತಾರೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಸಿದ‍್ಧರಾಮಯ್ಯರನ್ನ ಡಿಕೆಶಿ ಮತ್ತು ಪರಮೇಶ್ವರ್ ಅವರೇ ಸೋಲಿಸುತ್ತಾರೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ನವೆಂಬರ್,7,2022(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನ ಡಿ.ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಅವರೇ ಸೋಲಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನುಡಿದಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯಗೆ ಕ್ಷೇತ್ರ ಸಿಗದೇ ಅಲೆಮಾರಿಯಾಗಿದ್ದಾರೆ. ಸಿಎಂ ಆಗಬೇಕೆಂಬ ವ್ಯಕ್ತಿಗೆ ಇಂಥ ಸ್ಥಿತಿ ಎದುರಾಗಿದೆ.  ಸಿದ್ಧರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಬಾದಾಮಿಯಲ್ಲೂ ಸ್ಪರ್ಧಿಗೆ ಹಿಂದೇಟು ಹಾಕುತ್ತಿದ್ದಾರೆ.   ಸಿದ್ಧರಾಮಯ್ಯ ಬೇರೆಯವರಿಗೆ ಮೋಸ ಮಾಡಿದ್ಧಾರೆ. ಪರಮೇಶ್ವರ್ ಗೆ ಅಧಿಕಾರ ಹಿಡಿಯಲು ಸಿದ್ಧರಾಮಯ್ಯ ಬಿಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗದಂತೆ ತಡೆದರು.ಈಗ  ಡಿಕೆ ಶಿವಕುಮಾರ್ ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ಪರಮೇಶ್ವರ್ ಹಾಗೂ  ಡಿಕೆಶಿಯೇ ಸಿದ್ಧರಾಮಯ್ಯರನ್ನ ಸೋಲಿಸುತ್ತಾರೆ. ಕಾಂಗ್ರೆಸ್ ನಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.ಸಿದ‍್ಧರಾಮಯ್ಯರನ್ನ ಡಿಕೆಶಿ ಮತ್ತು ಪರಮೇಶ್ವರ್ ಅವರೇ ಸೋಲಿಸುತ್ತಾರೆ kse

ಕಾಂಗ್ರೆಸ್ ಪಕ್ಷ ಬಿಟ್ಟವರನ್ನು ಮರಳಿ ಪಕ್ಷಕ್ಕೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಆಹ್ವಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಪಕ್ಷ ಬೆತ್ತಲೆ ಆಗಿದೆ ಅಂತಾ ಅವರೇ ಒಪ್ಪಿಕೊಂಡಾಗೆ ಆಯಿತು. ಮರಳಿ ಕಾಂಗ್ರೆಸ್ ಪಕ್ಷಕ್ಕೆ  ಸೇರಿಸಿಕೊಳ್ಳಲ್ಲ ಅಂದಿದ್ದರು. ಇಂತಹ ದುಸ್ಥಿತಿ ಕಾಂಗ್ರೆಸ್ ಗೆ ಬಂದಿದೆ ನಿಮ್ಮದು ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು.

ಚುನಾವಣೆಗೆ ನಿಲ್ಲುವವರು ಎರಡು ಲಕ್ಷ ಕೊಡಬೇಕಂತೆ. ನಿಷ್ಠಾವಂತ ಕಾಂಗ್ರೆಸ್ಸಿಗ ಎರಡು ಲಕ್ಷ ಎಲ್ಲಿಂದ ತರುತ್ತಾನೆ. ಬಡವರು ಚುನಾವಣೆಗೆ ನಿಲ್ಲಬಾರದು ಅಂತಾ ಕಾಂಗ್ರೆಸ್ ಹೇಳಿ ಬಿಡಲಿ. ಈ ಬಗ್ಗೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Key words: Siddaramaiah- defeated – Dk shivakumar –Parameshwar-Former minister -KS Eshwarappa.