Sunday, September 27, 2026

BDA Apartments

ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್- ಸತೀಶ್ ಜಾ...
Home Front Page ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್- ಸತೀಶ್ ಜಾರಕಿಹೊಳಿ ಟೀಕೆ.

ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್- ಸತೀಶ್ ಜಾರಕಿಹೊಳಿ ಟೀಕೆ.

ರಾಯಚೂರು,ಅಕ್ಟೋಬರ್,22,2022(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.

ರಾಯಚೂರಿನಲ್ಲಿ ಇಂದು ಮಾತನಾಡಿದ ಸತೀಶ್ ಜಾರಕಿಹೊಳಿ, ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ ಆಗಿದೆ,  ಶ್ರೀಗಳು ಧರಣಿಗೆ ಕೂತಾಗಲೇ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ವಾಲ್ಮಿಕಿ ಸ್ವಾಮೀಜಿಗಳು 6 ತಿಂಗಳು ಧರಣಿ ಮಾಡಿದ್ದಾರೆ. ಈಗ  ತರಾತುರಿಯಲ್ಲಿ ಸರ್ವಪಕ್ಷ ಸಭೆ ನಡೆಸಿ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿದ್ದಾರೆ.  ಚುನಾವಣೆ ಹತ್ತಿರ ಬಂದಾಗಲ್ಲೆಲ್ಲಾಇದೆಲ್ಲವೂ ನಡೆಯುತ್ತೆ ಎಂದು  ಸತೀಶ್ ಜಾರಕಿಹೊಳಿ  ಟಾಂಗ್ ನೀಡಿದರು.ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ sathish

Key words: decision – increase -SC and ST -reservation – election- gimmick- Satish Jarakiholi