Sunday, August 9, 2026

BDA Apartments

Home Front Page ರಾಜ್ಯ ಸಚಿವ ಸಂಪುಟ ರಚನೆ ವಿಚಾರ: ಸಿಎಂ ಬಿಎಸ್ ಯಡಿಯೂರಪ್ಪ-ಬಿ. ಎಲ್.ಸಂತೋಷ್ ಭೇಟಿ: ಚರ್ಚೆ

ರಾಜ್ಯ ಸಚಿವ ಸಂಪುಟ ರಚನೆ ವಿಚಾರ: ಸಿಎಂ ಬಿಎಸ್ ಯಡಿಯೂರಪ್ಪ-ಬಿ. ಎಲ್.ಸಂತೋಷ್ ಭೇಟಿ: ಚರ್ಚೆ

ನವದೆಹಲಿ,ಆ,16,2019(www.justkannada.in) : ರಾಜ್ಯ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ನಿಂದ ಒಪ್ಪಿಗೆ ಪಡೆಯಲು ದೆಹಲಿಗೆ ತೆರಳಿರುವ ಸಿಎಂ ಬಿಎಸ್ ಯಡಿಯೂರಪ್ಪ ನಾಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನ ಭೇಟಿಯಾಗಲಿದ್ದಾರೆ.

ಈ ಮಧ್ಯೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ  ಬಿ.ಎಲ್ ಸಂತೋಷ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ನವದೆಹಲಿಯ  ಕರ್ನಾಟಕ ಭವನದಲ್ಲಿ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಳಿನ ಅಮಿತ್ ಶಾ ಭೇಟಿಗೂ ಮುನ್ನ  ಇಬ್ಬರು ನಾಯಕರು ಪೂರ್ವಭಾವಿಯಾಗಿ  ಭೇಟಿಯಾಗಿ ಯಾರನ್ನು ಸಚಿವರನ್ನಾಗಿ ಮಾಡಬೇಕಂದು ಸಮಾಲೋಚನೆ ನಡೆಸಿದ್ದಾರೆ.  ಉಭಯ ನಾಯಕರು ಸೇರಿ ಸಚಿವರ ಪಟ್ಟಿ ರೂಪಿಸಲಿದ್ದು ಅದೇ ಪಟ್ಟಿಯನ್ನ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದೆ ಇಡಲಿದ್ದಾರೆ ಎನ್ನಲಾಗುತ್ತಿದೆ. ಸಚಿವರ ಪಟ್ಟಿಗೆ ನಾಳೆ ಅಮಿತ್ ಶಾ ಒಪ್ಪಿಗೆ ನೀಡಿದರೇ 10 ರಿಂದ 12 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

Key words: State -Cabinet -Structure- CM BS Yeddyurappa-B.L.Santhosh-meet