Tuesday, September 1, 2026

BDA Apartments

Home Front Page  ರೈತರು ಕಾರ್ಮಿಕರಿಂದಲೂ 40ಪರ್ಸೆಂಟ್ ಕಮಿಷನ್ ವಸೂಲಿ- ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.

 ರೈತರು ಕಾರ್ಮಿಕರಿಂದಲೂ 40ಪರ್ಸೆಂಟ್ ಕಮಿಷನ್ ವಸೂಲಿ- ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.

ಮಂಡ್ಯ ಅಕ್ಟೋಬರ್,3,2022(www.justkannada.in): ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಿದೆ. ರೈತರು ಕಾರ್ಮಿಕರಿಂದಲೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಭಾರತ್ ಜೋಡೋ ಯಾತ್ರೆ ಉದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 40 ಪರ್ಸೆಂಟ್  ಕಮಿಷನ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಪ್ರತಿಯೊಬ್ಬರಿಂದಲೂ 40 ಪರ್ಸೆಂಟ್ ತೆಗೆದುಕೊಳ್ಳುತ್ತಾರೆ. ರೈತರು ಕಾರ್ಮಿಕರಿಂದಲೂ 40 ಕಮಿಷನ್ ಪಡೆಯುತ್ತಾರೆ. ಇಂತಹ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

Key words:  40 percent- commission – BJP –government– Rahul Gandhi