Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ನಳೀನ್ ಕುಮಾರ್ ಕಟೀಲ್ ವಿಧೂಷಕ ಇದ್ಧಂತೆ, ಮೆಚ್ಯೂರಿಟಿ ಇಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.

ನಳೀನ್ ಕುಮಾರ್ ಕಟೀಲ್ ವಿಧೂಷಕ ಇದ್ಧಂತೆ, ಮೆಚ್ಯೂರಿಟಿ ಇಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.

ಬೆಂಗಳೂರು,ಸೆಪ್ಟಂಬರ್,27,2022(www.justkannada.in): ಪಿಎಫ್ ಐ ಮತ್ತು ಎಸ್ ಡಿಪಿಐಗಳು ಬೆಳೆಯಲು ಸಿದ‍್ಧರಾಮಯ್ಯ ಕಾರಣ ಎಂದು ಆರೋಪಿಸಿದ್ಧ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ನಳೀನ್ ಕುಮಾರ್ ಕಟೀಲ್  ವಿಧೂಷಕ ಇದ್ದಂತೆ  ಮೆಚ್ಯೂರಿಟಿ ಇಲ್ಲ.  ಪ್ರತಿಪಕ್ಷದಲ್ಲಿದ್ದ ಇವರು ಯಾಕೆ ಮಾತನಾಡಿಲಿಲ್ಲ . ಇವರ ಬಾಯಲ್ಲೇನು ಕಡುಬು ಸಿಕ್ಕಿ ಹಾಕಕೊಂಡಿತ್ತಾ…? ಎಂದು ಪ್ರಶ್ನಿಸಿದರು.

ಸಿಎಂ,  ಸರ್ಕಾರದ ವಿರುದ್ಧ ಆರೋಪ ಮಾಡಿದ್ದೀವಿ. ಜಾತಿ ಮೇಲೆ ಅಲ್ಲ.  ತನಿಖೆ ಮಾಡಿಸೋದು ಬಿಟ್ಟು ಜಾತಿ ವಿಷಯ ಎತ್ತಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ನಮ್ಮ ಕಾಲದ್ದೂ ಸೇರಿಸಿ ತನಿಖೆ ಮಾಡಿಸಿ. ತನಿಖೆ ಮಾಡಿಸಲು ಭಯವೇಕೆ..?  ಜನರ ಗಮನ ಸೆಳೆಯಲು . ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಇವರಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು.

ನಮ್ಮ ವಿರುದ್ಧ ಪ್ರಧಾನಿ ಮೋದಿ 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ರು. ಅದಕ್ಕೆ ಯಾವ ದಾಖಲೆ ಕೊಟ್ಟಿದ್ದರು. ಆಗ ನಳೀನ್ ಎಲ್ಲಿದ್ದರು..? ಇವರೇ ಅಲ್ವಾ ಮೋದಿ ಕಡೆಯಿಂದ ಹೇಳಿಸಿದ್ದು ಎಂದು ಸಿದ್ಧರಾಮಯ್ಯ ಚಾಟಿ ಬೀಸಿದರು.

Key words: Corruption-BJP-Nalin kumar katil-former CM-Siddaramaiah