Monday, September 14, 2026

BDA Apartments

ವೆಸ್ಟ್ ವಿಂಡೀಸ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ BDA JK_Adv BDA Adv
Home Front Page ವೆಸ್ಟ್ ವಿಂಡೀಸ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ

ವೆಸ್ಟ್ ವಿಂಡೀಸ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ

ಟ್ರಿನಿಡಾಡ್ , ಆಗಸ್ಟ್ 15, 2019 (www.justkannada.in): ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅತ್ಯುತ್ತಮ ಆಟದಿಂದ ಮೂರನೇ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಮಳೆಯಿಂದಾಗಿ ಪಂದ್ಯವನ್ನು 35 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 35 ಓವರ್ ಗಳಲ್ಲಿ 7 ವಿಕೆಟ್ ಕಳಕೊಂಡು 240 ರನ್ ಬಾರಿಸಿತು. ಡಕ್ ವರ್ತ್ ಲೂಯಿಸ್ ನಿಯಮದಂತೆ ಟೀಂ ಇಂಡಿಯಾಗೆ 35 ಓವರ್ ಗಳಲ್ಲಿ 255 ರನ್ ಮಾಡುವ ಗುರಿ ನೀಡಲಾಯಿತು.

ಕೊಹ್ಲಿ ಶತಕ(114) ಶ್ರೇಯಸ್ ಅಯ್ಯರ್ 65 ರನ್ ನೆರವಿನಿಂದ ಟೀಂ ಇಂಡಿಯಾ 32.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿಕೊಂಡಿತು.