Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ಕಾಂಗ್ರೆಸ್ ನಾಯಕರು ಜನಪರ ಕೆಲಸ ಮಾಡಿದ್ರೆ ಇಂದು ವಿಪಕ್ಷ ಸ್ಥಾನದಲ್ಲಿ ಇರುತ್ತಿರಲಿಲ್ಲ- ಸಚಿವ ಸುಧಾಕರ್ ಟಾಂಗ್.

ಕಾಂಗ್ರೆಸ್ ನಾಯಕರು ಜನಪರ ಕೆಲಸ ಮಾಡಿದ್ರೆ ಇಂದು ವಿಪಕ್ಷ ಸ್ಥಾನದಲ್ಲಿ ಇರುತ್ತಿರಲಿಲ್ಲ- ಸಚಿವ ಸುಧಾಕರ್ ಟಾಂಗ್.

ಬೆಂಗಳೂರು,ಸೆಪ್ಟಂಬರ್,10,2022(www.justkannada.in): ಬಿಜೆಪಿ ಜನಸ್ಪಂದನ ಕಾರ್ಯಕ್ರಮವನ್ನ ಟೀಕಿಸಿದ ಕಾಂಗ್ರೆಸ್ ನಾಯಕರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ನಾಯಕರು  ಜನಪರ ಕೆಲಸ ಮಾಡಿದ್ದರೇ ಇಂದು ವಿರೋಧ ಪಕ್ಷದಲ್ಲಿ ಇರುತ್ತಿರಲಿಲ್ಲ. ದೇಶದಲ್ಲಿ ಕಾಂಗ್ರೆಸ್ ನಶಿಸುತ್ತಿದೆ. ಜನರಿಗೆ ರೋಧನೆ ನೀಡಿದ್ದಕ್ಕೆ ಕಾಂಗ್ರೆಸ್ ನನ್ನ ಜನ ವಿಪಕ್ಷದಲ್ಲಿ ಕೂರಿಸಿದ್ದಾರೆ. ಜನಪರ ಕೆಲಸ ಮಾಡಿದ್ರೆ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತಿರಲಿಲ್ಲ ಈ ಭಾಗದಲ್ಲಿ ಸ್ಪಲ್ಪ ಕಾಂಗ್ರೆಸ್ ಪರ ಇದೆ. ಆದರೆ ಅದು ಕೂಡ 2023ಕ್ಕೆ  ಕೊನೆಯಾಗಲಿದೆ ಎಂದು ಟೀಕಿಸಿದರು.

ಕೋಲಾರ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಒಬ್ಬನೇ ಬಿಜೆಪಿ ಶಾಸಕ. ಮುಂದಿನ ದಿನಗಳಲ್ಲಿ 7ರಿಂದ 8 ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದೇವೆ. ಇದನ್ನ ಸಾಧಿಸುತ್ತೇವೆ. ಸಮಾವೇಶ ಮೂಲಕ ವಿಪಕ್ಷದವರಿಗೆ ಉತ್ತರ ನೀಡ್ತೇವೆ. ನಮಗೂ ಸಮಾವೇಶದ ಬಗ್ಗೆ ಉತ್ಸಾಹ ಹೆಚ್ಚಾಗಿದೆ ಎಂದು ಸುಧಾಕರ್ ತಿಳಿಸಿದರು.

Key words: Congress- leaders –opposition- position -today – Minister -Sudhakar