Friday, September 18, 2026

BDA Apartments

ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ: ಬಿಜೆಪಿ ಜನೋತ್ಸವ ಮುಂದೂಡಿಕೆ BDA JK_Adv BDA Adv
Home Front Page ರಾಜ್ಯಾದ್ಯಂತ  ಮೂರು ದಿನ ಶೋಕಾಚರಣೆ: ಬಿಜೆಪಿ ಜನೋತ್ಸವ ಮುಂದೂಡಿಕೆ.

ರಾಜ್ಯಾದ್ಯಂತ  ಮೂರು ದಿನ ಶೋಕಾಚರಣೆ: ಬಿಜೆಪಿ ಜನೋತ್ಸವ ಮುಂದೂಡಿಕೆ.

ಬೆಳಗಾವಿ,ಸೆಪ್ಟಂಬರ್,7,2022(www.justkannada.in):   ಆಹಾರ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾದ ಹಿನ್ನೆಲೆ  ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆಗೆ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೂರು ದಿನ ರಾಜ್ಯಾದ್ಯಂತ ಶೋಕಾಚರಣೆಗೆ ತೀರ್ಮಾನಿಸಲಾಗಿದೆ. ಹಾಗೆಯೇ ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನ ಸೆಪ್ಟಂಬರ್ 11ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರದಲ್ಲಿ ನಾಳೆ ಬಿಜೆಪಿ ಜನೋತ್ಸವ ನಡೆಯಬೇಕಿತ್ತು. ಈ ಸಮಾವೇಶವನ್ನ ಭಾನುವಾರಕ್ಕೆ ಮುಂದಾಡಲಾಗಿದ್ದುಈ ಮೂಲಕ ಈ ಸಮಾವೇಶ ಸತತ 2ನೇ ಬಾರಿ ಅಧಿಕೃತವಾಗಿ ಮುಂದೂಡಲ್ಪಟ್ಟಿದೆ.

Key words: Three days -mourning – state-Postpone- BJP Janotsava-CM Basavaraja bommai