Sunday, August 9, 2026

BDA Apartments

Home Front Page ಬೆಂಗಳೂರನ್ನ ಬಿಜೆಪಿ ಸಿಂಕಿಂಗ್ ಸಿಟಿ ಮಾಡುತ್ತಿದೆ-ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ಬೆಂಗಳೂರನ್ನ ಬಿಜೆಪಿ ಸಿಂಕಿಂಗ್ ಸಿಟಿ ಮಾಡುತ್ತಿದೆ-ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ಕಲ್ಬರ್ಗಿ,ಸೆಪ್ಟಂಬರ್,5,2022(www.justkannada.in): ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರದಿಂದ ಜನರು ತೊಂದರೆಗೊಳಗಾದ ಹಿನ್ನೆಲೆ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಬೆಂಗಳೂರನ್ನ ಸಿಂಕಿಂಗ್ ಸಿಟಿ ಮಾಡುತ್ತಿದೆ. ಇಷ್ಟು ದಿನಗಳಾದ್ರೂ ಯಾಕೆ ಬೆಂಗಳೂರಿಗೆ ಉಸ್ತುವಾರಿ ನೀಡಲ್ಲ . ನಿನ್ನೆ ಇಷ್ಟೆಲ್ಲಾ ಮಳೆಯಾಗುತ್ತಿದ್ದರೂ ಸಿಎಂ ಹುಬ್ಬಳ್ಳಿಯಲ್ಲಿದ್ದರು. ಆದರೆ ಉಳಿದ ಸಚಿವರು ಎಲ್ಲಿಗೆ ಹೋಗಿದ್ಧರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ತರಾಟೆ ತೆಗೆದುಕೊಂಡಿದ್ದಾರೆ.

ಅಲ್ಲದೆ ಯಾಕೆ ಇನ್ನೂ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತಿಲ್ಲ. ಬೆಂಗಳೂರನಲ್ಲಿ 50 ಪರ್ಸೆಂಟ್ ಸಿಗುತ್ತೆ ಅಂತಾನಾ..?  ಸಚಿವರು ಈಗ ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿ ನೋಡೋಣ. ಲಂಚ ಎಂದಾಗ ಮುಗಿ ಬೀಳುವ ಬಿಜೆಪಿಗರು ಜನರ ಕಷ್ಟದ ವಿಚಾರದಲ್ಲಿ ಯಾಕೆ ಮಾತನಾಡಲ್ಲ ಎಂದು ಹರಿಹಾಯ್ದಿದ್ದಾರೆ.

Key words: Bengaluru- BJP – sinking city-MLA- Priyank Kharge