Saturday, September 19, 2026

BDA Apartments

ಕೋವಿಡ್ ಆತಂಕ ಮತ್ತಷ್ಟು ದೂರ: ದೇಶದಲ್ಲಿ6,809 ಹೊಸ ಕೋವಿಡ್ ಪ್ರಕರಣ BDA JK_Adv BDA Adv
Home Front Page ಕೋವಿಡ್ ಆತಂಕ ಮತ್ತಷ್ಟು ದೂರ: ದೇಶದಲ್ಲಿ6,809 ಹೊಸ ಕೋವಿಡ್ ಪ್ರಕರಣ

ಕೋವಿಡ್ ಆತಂಕ ಮತ್ತಷ್ಟು ದೂರ: ದೇಶದಲ್ಲಿ6,809 ಹೊಸ ಕೋವಿಡ್ ಪ್ರಕರಣ

ಬೆಂಗಳೂರು, ಸೆಪ್ಟೆಂಬರ್ 04, 2022 (www.justkannada.in): ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 6,809 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಸೋಂಕಿತರ ಸಂಖ್ಯೆ 4,44,56,535ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 55,114ಕ್ಕೆ ಕಡಿಮೆಯಾಗಿವೆ.

ಕೇರಳದಲ್ಲಿ ಐವರು ಸೇರಿದಂತೆ ದೇಶದಾದ್ಯಂತ 26 ಜನರು ಸಾವಿಗೀಡಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 5,27,991ಕ್ಕೆ ಏರಿಕೆಯಾಗಿದೆ. 8,414 ಜನರು ಇದೇ ಅವಧಿಯಲ್ಲಿ ಗುಣಮುಖರಾಗಿದ್ದಾರೆ.

ಚೇತರಿಕೆ ದರ ಶೇ 98.69 ರಷ್ಟಿದೆ . ದೈನಂದಿನ ಪಾಸಿಟಿವಿಟಿ ದರ ಶೇ 2.12ರಷ್ಟಿದ್ದರೆ, ಮರಣ ಪ್ರಮಾಣ ಶೇ 1.19ರಷ್ಟಿದೆ. ಈವರೆಗೆ ಕೋವಿಡ್‌ನಿಂದ 4,38,73,430 ಜನರು ಗುಣಮುಖರಾಗಿದ್ದಾರೆ.