Saturday, August 15, 2026

BDA Apartments

Home Front Page ದೇಶದಲ್ಲಿ ಹೊಸದಾಗಿ 11,539 ಮಂದಿಗೆ ಕೊರೊನಾ ಸೋಂಕು ದೃಢ

ದೇಶದಲ್ಲಿ ಹೊಸದಾಗಿ 11,539 ಮಂದಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು, ಆಗಸ್ಟ್ 21, 2022 (www.justkannada.in): ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,539 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ.

ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಮುಖವಾಗಿದ್ದು ಕಳೆದ 24 ಗಂಟೆಯಲ್ಲಿ 43 ಮಂದಿ ಬಲಿಯಾಗಿದ್ದಾರೆ.

ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,27,332 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 99,879 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಈವರೆಗೆ 4,37,12,218 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ನಿನ್ನೆ 26,58,755 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 2,09,67,06,895 ಡೋಸ್ ಲಸಿಕೆ ಹಾಕಲಾಗಿದೆ.