Sunday, August 2, 2026

BDA Apartments

Home Crime ಗನ್ ಪಾಯಿಂಟ್ ನಿಂದ ಬೆದರಿಸಿ, ಸೊಸೆಯನ್ನೇ ಅತ್ಯಾಚಾರಗೈದ ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್ ಐಆರ್...

ಗನ್ ಪಾಯಿಂಟ್ ನಿಂದ ಬೆದರಿಸಿ, ಸೊಸೆಯನ್ನೇ ಅತ್ಯಾಚಾರಗೈದ ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್ ಐಆರ್ ದಾಖಲು

ನವದೆಹಲಿ:ಆ-11:(www.justkannada.in) ಸೊಸೆಯ ರೂಮಿಗೆ ನುಗ್ಗಿ ಗನ್ ಪಾಯಿಂಟಿಂದ ಬೆದರಿಸಿ, ಸೊಸೆಯನ್ನು ಅತ್ಯಾಚಾರ ಮಾಡಿದ್ದ ಬಿಜೆಪಿ ಮಾಜಿ ಶಾಸಕ ಮನೋಜ್‌ ಶೋಕೀನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಡಿ. 31ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೊಸೆ ದೂರಿನ ಆಧಾರದ ಮೇಲೆ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಡಿ.31, 2018ರಂದು ತನ್ನ ಪತಿ, ಸೋದರ ಮತ್ತು ಸೋದರಸಂಬಂಧಿಯೊಂದಿಗೆ ತಾಯಿ ಮನೆಯಿಂದ ಹೊರಟು ಮೀರಾ ಬಾಗ್ ಪ್ರದೇಶದ ತನ್ನ ಅತ್ತೆ ಮನೆಗೆ ಹೋಗಿದ್ದರು. ಅಲ್ಲಿಂದ ಹೊಸ ವರ್ಷಾಚರಣೆಗಾಗಿ ಪತಿಯೊಂದಿಗೆ ಪಶ್ಚಿಮ್ ವಿಹಾರ ಪ್ರದೇಶದಲ್ಲಿರುವ ಹೊಟೇಲ್‌ಗೆ ತೆರಳಿದ್ದೆವು. ಈಗಾಗಲೇ ಅಲ್ಲಿಗೆ ಇತರೆ ಸಂಬಂಧಿಗಳು ಬಂದಿದ್ದರು. ಸಂಭ್ರಮಾಚರಣೆಯ ಬಳಿಕ ಸುಮಾರು 12.30ರ ಸುಮಾರಿಗೆ ನಾವು ಮಾವನ ಮನೆಗೆ ತೆರಳಿದೆವು. ಈ ವೇಳೆ ನನ್ನ ಗಂಡ ಸ್ನೇಹಿತರೊಂದಿಗೆ ಹೊರಗಡೆ ಹೋದರು. ನಾನು ಮಲಗಲೆಂದು ಕೋಣೆಗೆ ತೆರಳಿದೆ.

ತಡರಾತ್ರಿ 1.30ರ ಸುಮಾರಿಗೆ ನನ್ನ ಮಾವ ಬಾಗಿಲು ತೆಗೆ ನಿನ್ನೊಂದಿಗೆ ಮಾತನಾಡುವುದಿದೆ ಎಂದರು. ಬಳಿಕ ರೂಮಿನೊಳಗಡೆ ಬರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಹೊರಗೆ ಹೋಗುವಂತೆ ಹೇಳಿದ್ದಕ್ಕೆ ಗನ್‌ ತೋರಿಸಿ ಬೆದರಿಸಿದರು. ಕೂಗಲು ಶುರು ಮಾಡಿದಾಗ ನನ್ನ ಸೋದರನನ್ನು ಹತ್ಯೆ ಮಾಡುವುದಾಗಿ ಹೇಳಿದರು. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಎಫ್‌ಐಆರ್‌ನಲ್ಲಿ ದೂರಲಾಗಿದೆ.

ಈ ಹಿಂದೆಯೇ ಅಂದರೆ 2018ರ ಡಿಸೆಂಬರ್‌ನಲ್ಲಿ ಮಾವನ ವಿರುದ್ಧ ಮಹಿಳೆಯರ ವಿರುದ್ಧ ಅಪರಾಧ(CAW) ಸೆಲ್‌ನಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದಾಗಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.

ಮಾಜಿ ಶಾಸಕನ ವಿರುದ್ಧ ಐಪಿಸಿ ಸೆಕ್ಷನ್‌ 376 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗನ್ ಪಾಯಿಂಟ್ ನಿಂದ ಬೆದರಿಸಿ, ಸೊಸೆಯನ್ನೇ ಅತ್ಯಾಚಾರಗೈದ ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್ ಐಆರ್ ದಾಖಲು

Delhi Police book former BJP MLA for allegedly raping daughter-in-law